ಮತ ಎಣಿಕೆ-ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ: ಜಿಲ್ಲಾಧಿಕಾರಿ

ಉಡುಪಿ, ಮೇ 20: ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಕ್ಕೆ ಸಂಬಂಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ 23 ರಂದು ಬ್ರಹ್ಮಗಿರಿಯ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ತನಕ ಸದ್ರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಈ ಆದೇಶದನ್ವಯ ಬ್ರಹ್ಮಗಿರಿ ಜಂಕ್ಷನ್‍ನಿಂದ ಅಜ್ಜರಕಾಡು ಎಲ್.ಐ.ಸಿ […]

ಉಡುಪಿ:ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ ಉದ್ಘಾಟನೆ

ಉಡುಪಿ: ಉಡುಪಿಯ ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ ‘ಯಕ್ಷ ಕಲಾ ವೈಭವವನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶ ಬಿ.ಎ. ಪಾಟೀಲ್‌ ಸೋಮವಾರ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶ ಬಿ.ಎ. ಪಾಟೀಲ್‌ ಮಾತನಾಡಿ, ವಕೀಲ ವೃತ್ತಿ ಹೆಚ್ಚು ಒತ್ತಡದಿಂದ ಇರುವ ವೃತ್ತಿಯಾಗಿದೆ. ಈ ಮಧ್ಯೆ ವಕೀಲರು ನಮ್ಮ ಸಂಸ್ಕೃತಿಗಾಗಿ ಸಮಯವನ್ನುವಿನಿಯೋಗಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶಬಿ.ಎ. ಪಾಟೀಲ್‌ ಹೇಳಿದರು. ಸಾಹಿತಿ ಶಿವರಾಮ ಕಾರಂತರು ಮಾಡಿದ ಹೊಸ ಹೊಸ ಪ್ರಯೋಗಗಳಿಂದ ಇಂದು […]

ಉಡುಪಿಯ ಸುಜ್ಞಾನ ಶಿಕ್ಷಣ‌ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಶಿಕ್ಷಣ

ಉಡುಪಿ: ಉಡುಪಿ ಪುತ್ತಿಗೆ ಮಠದ ಬಳಿ ಇರುವ ಸುಜ್ಞಾನ ಶಿಕ್ಷಣ ಸಂಸ್ಥೆಯು ಕಳೆದ 7 ವರ್ಷದಿಂದ ಸತತವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜೊತೆ ಜೊತೆಗೆ ಸ್ಪರ್ಧಾತ್ಮ ಶಿಕ್ಷಣವನ್ನು ನೀಡುತ್ತಿದೆ. ಈ ಶಿಕ್ಷಣ ಸಂಸ್ಥೆಯು ಪ್ರಥಮ ಪಿಯುಸಿ ಫೇಲ್ ಆದ ವಿದ್ಯಾರ್ಥಿ ಗಳಿಗೆ ನೇರವಾಗಿ ದ್ವೀತಿಯ ಪಿಯುಸಿ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿದೆ. ಇಲ್ಲಿ ರೆಗ್ಯುಲರ್ ಕ್ಲಾಸಸ್, ಎಕ್ಸ್ಪರ್ಟ್  ಲೆಕ್ಚರ್ಸ್, ಡಿಸಿಪ್ಲಿನ್, ರಿಸಲ್ಟ್ ಓರಿಯಂಟೆಡ್ ಶಿಕ್ಷಣವನ್ನು  ನೀಡಲಾಗುವುದು. ಹಾಗೂ 8ನೇ, 9ನೇ, 10ನೇ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ […]