ಪಲಿಮಾರು ಮಠದ 31ನೇ ವಿದ್ಯಾರಾಜೇಶ್ವರತೀರ್ಥ ಯತಿಗಳಿಗೆ ಮಾಲಿಕೆ ಮಂಗಳಾರತಿ
ಉಡುಪಿ: ಪಲಿಮಾರು ಮಠದ 31 ನೇ ಯತಿಗಳಾಗಿ ಶ್ರೀ ವಿದ್ಯಾರಾಜೇಶ್ವರತೀರ್ಥ ಪಟ್ಟಾಭಿಷೇಕ ನಂತರ ಇಂದು ರಾಜಾಂಗಣದಲ್ಲಿ ಪರ್ಯಾಯ ಮಠದ ವತಿಯಿಂದ ಮಠಾಧೀಶರುಗಳಿಗೆ ದಿವಾನರಾದ ವೇದವ್ಯಾಸ ತಂತ್ರಿಗಳು ಮಾಲಿಕೆ ಮಂಗಳಾರತಿ ಮಾಡಿದರು. ನಂತರ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಹಿರಿಯ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರಿಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರಿಪಾದರು,ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರಿಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ […]
ಪಲಿಮಾರು ಮಠಕ್ಕೆ 32ನೇ ಯತಿಯಾಗಿ ವಿದ್ಯಾರಾಜೇಶ್ವರತೀರ್ಥರ ಪಟ್ಟಾಭಿಷೇಕ
ಉಡುಪಿ: ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶುಕ್ರವಾರ ಸನ್ಯಾಸ ಆಶ್ರಮ ಸ್ವೀಕರಿಸಿದ ನೂತನ ಯತಿಗಳಿಗೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಇಂದು ಮಧ್ಯಾಹ್ನ 12.20ಕ್ಕೆ ಪಲಿಮಾರು ಮಠದ 31ನೇ ಯತಿಯನ್ನಾಗಿ ಪಟ್ಟಾಭಿಷೇಕ ನೆರವೇರಿಸಿ, ವಿದ್ಯಾರಾಜೇಶ್ವರತೀರ್ಥ ಎಂದು ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಪೇಜಾವರ ಹಿರಿಯ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರಿಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರಿಪಾದರು,ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರಿಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು, ಕಾಣಿಯೂರು […]
ನೀರು ಬಾಟಲಿ ಖರೀದಿಸುವಾಗ ನೀವು ಗಮನಿಸಬೇಕಾದ ಅಂಶಗಳು
ಉಡುಪಿ: ಬಿಸಿಲ ಝಳದಿಂದಾಗಿ ಜನರು ಕಂಡಕಂಡಲ್ಲಿ ನೀರು ಕುಡಿಯುವುದು ಸಹಜ. ಶುಚಿತ್ವ ಜಾಗೃತಿಯಿಂದಾಗಿ ಬಹುತೇಕ ಎಲ್ಲರೂ ಬಿಸಿಲೇರಿ ನೀರನ್ನು ಶುದ್ಧ ಜಲವೆಂದು ಕುಡಿಯುತ್ತಾರೆ. ಆದರೆ ಇದರಲ್ಲೂ ಮೋಸ ಮಾಡುವವರಿದ್ದಾರೆನ್ನಲಾಗುತ್ತಿದೆ. ಮಣಿಪಾಲ ಆಸ್ಪತ್ರೆಯ ನಿವೃತ್ತ ಹಿರಿಯ ಪ್ರಯೋಗಾಲಯ ತಂತ್ರಜ್ಞ ನಿತ್ಯಾನಂದ ಪಾಟೀಲ್ ಅವರು ಎರಡು ದಿನಗಳ ಹಿಂದೆ ಉಡುಪಿ ಕೋರ್ಟ್ ಎದುರಿನ ಅಂಗಡಿಯೊಂದರಿಂದ ಬಿಸ್ಲೆರಿ ನೀರಿನ ಬಾಟಲಿಯನ್ನು ಖರೀದಿಸಿ ಕುಡಿದರು. ಸಂಜೆಯಾಗುತ್ತಲೆ ನಿತ್ರಾಣ ಬಂತು. ಇವರು ಬೇರೆಲ್ಲಿಯೂ ಆ ದಿನ ಆಹಾರವನ್ನು ತೆಗೆದುಕೊಂಡಿರಲಿಲ್ಲ. ಮನೆ ಹೊರತುಪಡಿಸಿ ಇತರೆಡೆಗಳಲ್ಲಿ ಕುಡಿಯುವುದೂ ಇಲ್ಲ. […]
ಪ್ರಧಾನಿ ಮೋದಿ ‘ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂದ ಟೈಮ್ ಲೇಖನಕ್ಕೆ ಬಿಜೆಪಿ ಟೀಕೆ
ಅಮೆರಿಕದ ಟೈಮ್ ನಿಯತಕಾಲಿಕೆ ತನ್ನ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಪ್ರಕಟಿಸಿ, ಅದಕ್ಕೆ ‘ಇಂಡಿಯಾಸ್ ಡಿವೈಡರ್ ಇನ್ ಚೀಫ್’ (ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಅದರ ಲೇಖಕ ಪಾಕಿಸ್ತಾನಿಯಾಗಿದ್ದು, ಪ್ರಧಾನಿ ಮೋದಿ ಗೌರವಕ್ಕೆ ದಕ್ಕೆ ತರುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, ಟೈಮ್ ಮ್ಯಾಗಜಿನ್ ಲೇಖಕ ಪಾಕಿಸ್ತಾನಿಯಾಗಿದ್ದು, ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡುವ […]