ಪಲಿಮಾರು ಮಠಕ್ಕೆ 32ನೇ ಯತಿಯಾಗಿ  ವಿದ್ಯಾರಾಜೇಶ್ವರತೀರ್ಥರ ಪಟ್ಟಾಭಿಷೇಕ

ಉಡುಪಿ: ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ಶುಕ್ರವಾರ ಸನ್ಯಾಸ ಆಶ್ರಮ ಸ್ವೀಕರಿಸಿದ ನೂತನ ಯತಿಗಳಿಗೆ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಇಂದು ಮಧ್ಯಾಹ್ನ 12.20ಕ್ಕೆ ಪಲಿಮಾರು ಮಠದ 31ನೇ ಯತಿಯನ್ನಾಗಿ ಪಟ್ಟಾಭಿಷೇಕ‌ ನೆರವೇರಿಸಿ, ವಿದ್ಯಾರಾಜೇಶ್ವರತೀರ್ಥ ಎಂದು ನಾಮಕರಣ ಮಾಡಿದರು.

ಈ ಸಂದರ್ಭದಲ್ಲಿ  ಪೇಜಾವರ ಹಿರಿಯ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರಿಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರಿಪಾದರು,ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರಿಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥಶ್ರೀಪಾದರು,  ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರಿಪಾದರು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರಿಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರಿಪಾದರು,ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರತೀರ್ಥ ಶ್ರಿಪಾದರು, ಅದಮಾರು ಕಿರಿಯ  ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರಿಪಾದರು ಉಪಸ್ಥಿತರಿದ್ದರು.ಧಾರ್ಮಿಕ ಕಾರ್ಯಕ್ರಮಗಳನ್ನು ವಿದ್ವಾಂಸರಾದ ಸುಬ್ರಮಣ್ಯ ಭಟ್ ಗುಂಡಿಬೈಲ್ ನಡೆಸಿಕೊಟ್ಟರು,ಹಾಗೂ ಪರ್ಯಾಯ ಮಠದ ದಿವಾನರಾದ ವೇದವ್ಯಾಸ ತಂತ್ರಿ,ಕಂಬ್ಲಕಟ್ಟ ಸುರೇಂದ್ರ ಉಪಾದ್ಯಾಯ,ಕಂಬ್ಲಕಟ್ಟ ಉಪಾದ್ಯಾಯ ಮೊದಲಾದವರು ಉಪಸ್ಥಿತರಿದ್ದರು.