ಖಾಸಗಿ ಬಸ್ ನ ಅವಾಂತರ: ಬಲಗೈ ಕಳೆದುಕೊಂಡ ಹುಡುಗನ ಚಿಕಿತ್ಸೆಗೆ ನೆರವಾಗುವಿರಾ?

ಉಡುಪಿ: ಬಸ್ ನ ಕಿಟಕಿ ಬದಿಯ ಸೀಟ್ ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಅತೀ ಧಾವಂತದಲ್ಲಿ ನುಗ್ಗಿ ಬಂದ ಬಸ್ ವೊಂದು ಅಂತಿಮ ವರ್ಷದ ಪದವಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಯೋರ್ವನ ಬಲಗೈಯನ್ನು ಬಲಿ ಪಡೆದುಕೊಂಡ ದಾರುಣ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದ್ದು, ಸದ್ಯ ಆತನ ಚಿಕಿತ್ಸೆ ಗೆ ನೆರವು‌ ನೀಡಬೇಕಾಗಿದೆ. ಅಜಿತ್ ಶೆಟ್ಟಿ ಮೂಲತ: ಹಿರಿಯಡಕದ ಅಂಜಾರಿನವರಾಗಿದ್ದು, ಎಂಜಿಎಂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಅಜಿತ್ ಮಂಗಳವಾರದಂದು ತರಗತಿ ಮುಗಿಸಿಕೊಂಡು ಕಾಲೇಜಿನಿಂದ ಮನೆಯತ್ತಾ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ಕಳದ […]