ಗಮನಿಸಿ, ಉಡುಪಿ ಜಿಲ್ಲೆಯ ಪ.ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಷ್ಟಿತ ಶಾಲೆಗಳಲ್ಲಿ ಪ್ರವೇಶಾವಕಾಶವಿದೆ

ಉಡುಪಿ: 2019-20 ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ 2 ಲಕ್ಷ ರೂ. ಮಿತಿಗೊಳಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇಲಾಖಾ ವತಿಯಿಂದ ಗುರುತಿಸಲಾಗಿರುವ ಪ್ರತಿಷ್ಟಿತ ಶಾಲೆಯಲ್ಲಿ 6 ನೇ ತರಗತಿಗೆ ಹೊಸದಾಗಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲು ಸರ್ಕಾರವು ಅವಕಾಶ ಕಲ್ಪಿಸಿದೆ.      5 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು 6 ನೇ […]

ಮೇ 2 : ಕಾರ್ಕಳ ಪುರಸಭೆ, ಸಾರ್ವಜನಿಕ ಕುಂದುಕೊರತೆ ಸಭೆ

ಉಡುಪಿ: ಕಾರ್ಕಳ ಪುರಸಭೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಹಾಗೂ ಅಹವಾಲುಗಳನ್ನು ಸ್ವೀಕರಿಸಲು ಸಾರ್ವಜನಿಕ ಕುಂದುಕೊರತೆ ಸಭೆಯು ಮೇ 2 ರಂದು ಬೆಳಗ್ಗೆ 11.30 ಕ್ಕೆ ಕಾರ್ಕಳ ಪುರಸಭಾ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಗೆ ಸಾರ್ವಜನಿಕರು ಹಾಜರಾಗುವಂತೆ ಕಾರ್ಕಳ ಪುರಸಭೆಯ ಆಡಳಿತಾಧಿಕಾರಿ ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಇನ್ನೂ ಆಗಿಲ್ಲ ಆಗುಂಬೆ ಘಾಟ್ ಕಾಮಗಾರಿ ಪೂರ್ಣ: ಮೇ.15 ರ ವರೆಗೆ ವಾಹನ ಸಂಚಾರ ನಿಷೇಧ

ಉಡುಪಿ,: ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ 30 ರ ವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆದರೆ ನಿಗದಿತ ಸಮಯದಲ್ಲಿ ಕಾಮಗಾರಿ ದುರಸ್ತಿ ಆಗದ ಕಾರಣ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಾಹನ ಸಂಚಾರ ನಿಷೇಧ ಆದೇಶವನ್ನು ಮೇ 15 ರ ವರೆಗೆ ವಿಸ್ತರಿಸಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.     ಈ ಅವಧಿಯಲ್ಲಿ ಸಾಮಾನ್ಯ ಬಸ್, […]