ದೊಡ್ಡ ಪತ್ರೆಯ ದೊಡ್ಡಸ್ತಿಕೆ ನಿಮಗೆ ಗೊತ್ತಾ ?: ಶೀತ, ಕೆಮ್ಮಿಗೆ ರಾಮಬಾಣ, ಇದರ ಪೋಡಿ ಸೂಪರ್
ನಮ್ಮ ಮನೆ ಅಂಗಳದಲ್ಲೇ ಬೆಳೆಯಬಹುದಾದ ಜೌಷದೀಯ ಸಸ್ಯಗಳ ಪೈಕಿ ದೊಡ್ಡಪತ್ರೆಗೆ ತನ್ನದೇ ಆದ ದೊಡ್ಡಸ್ತಿಕೆ ಇದೆ. ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವೊಂದಿದ್ದರೆ ಸಣ್ಣ ಪುಟ್ಟ ಕಾಯಿಲೆಗೆಲ್ಲಾ ದೊಡ್ಡಪತ್ರೆ ದೊಡ್ಡ ಪಾತ್ರವಹಿಸುತ್ತದೆ. ದೊಡ್ಡ ಪತ್ರೆಯ ಸಸ್ಯಶಾಸ್ತ್ರೀಯ ಹೆಸರು ಕಾಲಿಯಸ್ ಅರೋಮ್ಯಾಟಿಕಸ್. ಈ ಸಸ್ಯದ ಮೂಲ ಭಾರತ, ಆಗ್ನೇಯ ಏಷ್ಯಾ, ದಪ್ಪ ಮುಸುಡಿಯ ಈ ದೊಡ್ಡ ಪತ್ರೆಯ ಗಿಡ, ಮನೆಯ ನೀರು ಹೋಗುವಲ್ಲಿಯೋ?ಅಂಗಳದ ನೀರಿನ ತೇವಾಂಶ ದಟ್ಟವಾಗಿ ವ್ಯಾಪಿಸುವ ಜಾಗ ಹುಡುಕಿ ಹುಲುಸಾಗಿ ಬೆಳೆಯುತ್ತದೆ. ಔಷಧೀಯ ಆಗರ: ದಪ್ಪ ಕಾಂಡಗಳಿಂದ […]
ಸಹಜ ಭಕ್ತಿಗೆ ಒಲಿಯುತ್ತಾನೆ ಪಿಲಾರ್ ಖಾನದ ಶಿವ : ಕಾಡ ನಡುವೆ ಕಾಡುವ ಈ ಶಿವಮಂದಿರಕ್ಕೊಮ್ಮೆ ಬನ್ನಿ
ಇಲ್ಲಿನ ದೇವರಿಗೆ ಆಡಂಭರವಿಲ್ಲ. ಸಿಂಗಾರದ ಹೊರೆಯಿಲ್ಲ, ಬಂಗಾರ ವೈಢೂರ್ಯಗಳ ಹಂಗು ಮೊದಲೇ ಇಲ್ಲ. ಕಾಡಿನ ನೀರವದಲ್ಲಿ ಹಸಿರಿನ ಉನ್ಮತ್ತ ನಗುವಿನ ಮದ್ಯೆ ನಿರಾಡಂಬರವಾಗಿ ಕೂತ ಮಹಾಲಿಂಗೇಶ್ವರ ದೇವರು ಕಾಡ ಜೀವಗಳನ್ನು ಪೊರೆಯುತ್ತಲೋ, ಅವರ ಭಕ್ತಿ ಭಾವಗಳಿಗೆ ಸಂತುಷ್ಟನಾಗುತ್ತಲೋ ಕೂತ ಪರಿಯೇ ನೋಡಲು ಚೆಂದ. ಮನಸ್ಸು ಶಾಂತವಾಗಲು ಇಲ್ಲಿಗೊಮ್ಮೆ ಬರಬೇಕು. ಇದು ಶಿವನ ತಾಣ ಕಾರ್ಕಳ ತಾಲೂಕಿನ ಮುದರಂಗಡಿ ಗ್ರಾಮದ ಪಿಲಾರ್ಖಾನ ಎಂಬಲ್ಲಿ ಕಾಡಿನ ಸೆರಗಲ್ಲಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಬಂದರೆ ಮನ ಭಕ್ತಿಯ ಸಡಗರದಲ್ಲಿ ಕಳೆದು ಹೋಗುತ್ತದೆ. […]
ಶ್ರೀಲಂಕ ಭಯೋತ್ಪಾದಕ ದಾಳಿ- ಮೃತ ಆತ್ಮಗಳಿಗೆ ಶಾಂತಿ ಕೋರಿ ಉಡುಪಿ ಕ್ರೈಸ್ತ ಭಾಂಧವರಿಂದ ಪ್ರಾರ್ಥನಾ ಸಭೆ
ಉಡುಪಿ: ಶ್ರೀಲಂಕಾದ ಕೊಲಂಬೊ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದವರಆತ್ಮಕ್ಕೆ ಶಾಂತಿ ಕೋರಿ ಉಡುಪಿ ಜಿಲ್ಲೆಯ ಕ್ರೈಸ್ತ ಭಾಂಧವರಿಂದ ಶೋಕಮಾತಾ ಇಗರ್ಜಿಯಲ್ಲಿ ಪ್ರಾರ್ಥನಾ ಸಭೆ ಜರುಗಿತು.ಸಭೆಯಲ್ಲಿ ವಿವಿಧ ಸಭೆಗಳ ಧರ್ಮಗುರುಗಳು ಹಾಗೂ ಕ್ರೈಸ್ತ ಭಾಂಧವರು ಭಾಗವಹಿಸಿ ಮೃತಆತ್ಮಗಳಿಗೆ ಸದ್ಗತಿ ಕೋರಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಏಪ್ರೀಲ್ 21 ಜಗತ್ತಿನಾದ್ಯಂತ ಪಾಸ್ಕ ಹಬ್ಬದಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯದಲ್ಲಿ ಶ್ರೀಲಂಕಾದ ಜನತೆಗೆ ಕರಾಳ ದಿನವಾಯಿತು. […]