ಜಿಲ್ಲಾಧಿಕಾರಿಯವರಿಂದ ಮತದಾನ ಆಮಂತ್ರಣ.. ಉಡುಪಿ ಜಿಲ್ಲೆಯ ಆತ್ಮೀಯ ಮತದಾರ ಬಂಧುಗಳೇ..
ನಮ್ಮದು ಜಗತ್ತಿನಲ್ಲಿ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಹಲವಾರು ಭಾಷೆ, ಜನಾಂಗ, ಸಂಸ್ಕøತಿ, ಧರ್ಮ ಹೊಂದಿರುವ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಬದುಕುತ್ತಿದ್ದೇವೆ. ಆದ್ದರಿಂದ ವಿಶ್ವದಲ್ಲಿ ನಮ್ಮದು ಬೃಹತ್ ಪ್ರಜಾ ಸತ್ತಾತ್ಮಕ ಜಾತ್ಯಾತೀತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಮತದಾರ ಬಂದುಗಳೇ, ನಮ್ಮ ದೇಶಕ್ಕೆ ಸುಭದ್ರ ಸರ್ಕಾರವನ್ನು ಆಯ್ಕೆ ಮಾಡಲು ಇದೇ ಏಪ್ರಿಲ್ 18 ರ ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಂದು […]
ಮೇ.5: ನಟಿ ಆಮಿ ಜಾಕ್ಸನ್ ಎಂಗೇಜ್ ಮೆಂಟ್
ಮದುವೆಗೆ ಮುನ್ನವೇ ಗರ್ಭಿಣಿಯಾದ ಸಂಗತಿಯನ್ನು ತಿಳಿಸುವ ಮೂಲಕ ದೊಡ್ಡ ಸುದ್ದಿ ಮಾಡಿದ್ದ ನಟಿ ಆಮಿ ಜಾಕ್ಸನ್ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿದೆ. ಮೇ 5ಕ್ಕೆ ಆಮಿ ಹಾಗೂ ಜಾರ್ಜ್ ಎಂಗೇಜ್ ಮೆಂಟ್ ನಡೆಯಲಿದೆ. ತಮ್ಮ ಗೆಳೆಯ ಜಾರ್ಜ್ ಜತೆಗೆ ನಿಶ್ಚಿತಾರ್ಥ ಲಂಡನ್ ನಲ್ಲಿ ಎಂಗೇಜ್ ಮೆಂಟ್ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರಂತೆ. ಗ್ರೀಕ್ ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಉದ್ಯಮಿ ಜಾರ್ಜ್ ಜೊತೆಗೆ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದ […]
ಬಂಟರ ಸಂಘ ಬೆಂಗಳೂರು ಬಿಸುಪರ್ಬ ಸಾಂಸ್ಕೃತಿಕ ಸ್ಪರ್ಧೆ, ಕಾರ್ಕಳ ಬಂಟರ ಸಂಘದ ಮುಡಿಗೆ ಪ್ರಥಮ ಪ್ರಶಸ್ತಿ
ಬೆಂಗಳೂರು: ಬಂಟರ ಸಂಘ ಬೆಂಗಳೂರು ಸಾಂಸ್ಕೃತಿಕ ಸಮಿತಿಯ ವತಿಯಿಂದ ಬಿಸುಪರ್ಬದ ಅಂಗವಾಗಿ ಆಯೋಜಿಸಲಾಗಿದ ಅಂತರ್ ಬಂಟ್ಸ್ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ ಪ್ರಥಮ ಸ್ಥಾನ ಪಡೆದಿದೆ. ದ್ವೀತಿಯ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಸಂಘ, ತೃತೀಯ ಪ್ರಶಸ್ತಿಯನ್ನು ಥಾಣೆ ಬಂಟರ ಸಂಘ ಪಡೆದಿದೆ. ಕಾರ್ಕಳ ಬಂಟರ ಸಂಘದ ಅದ್ಯಕ್ಷ ನಂದಳಿಕೆ ಸುಹಾಸ್ ಹೆಗ್ಡೆ ಅವರ ನೇತೃತ್ವದಲ್ಲಿ ಭಾಗವಹಿಸಿದ ತಂಡ ತುಳುನಾಡ ಸಿರಿ ಹಾಗು ಬಂಟ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ನೀಡಿ ಕಲಾಭಿಮಾನಿಗಳ ಪ್ರಶಂಸೆಯೊಂದಿಗೆ ಪ್ರಥಮ ಪ್ರಶಸ್ತಿಯನ್ನು […]
ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಏ.19: ಸಿರಿಜಾತ್ರೆ, ಏ.22: ರಥೋತ್ಸವ
ಹಿರಿಯಡಕ: ಪೌರಾಣಿಕ ಹಿನ್ನೆಲೆಯುಳ್ಳ ಉಡುಪಿ ತಾಲೂಕಿನ ಹಿರಿಯಡಕದ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಎ. 9ರಂದು ವಾರ್ಷಿಕಮಹೋತ್ಸವ ಪ್ರಾರಂಭಗೊಂಡಿದ್ದು, ಏ. 24ರ ವರೆಗೆ ಜರಗಲಿದೆ. ಏ.19ರಂದು ಸಿರಿಜಾತ್ರೆ, ಏ. 22ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಏ. 19ರಂದು ಧ್ವಜಾರೋಹಣ, ರಾತ್ರಿ ಆರಾಧನಾ ಪೂಜೆ, ಪೂರ್ಣಿಮಾ ಉತ್ಸವ, ರಾತ್ರಿ ಹಾಲುಹಬ್ಬ, ಸವಾರಿ ಬಲಿ, ಬ್ರಹ್ಮಮಂಡಲ, ಭೂತ ಬಲಿ, ಏ. 20ರಂದು ರಾತ್ರಿ ಆರಾಧನಾ ಪೂಜೆ, ಬೈಗಿನ ಬಲಿ, ಸವಾರಿ ಬಲಿ, ಏ. 21ರಂದು ರಾತ್ರಿ ಆರಾಧನಾ ಪೂಜೆ, ನಿತ್ಯಬಲಿ, […]
ಕಾರ್ಕಳ ಕ್ಷೇತ್ರದಾದ್ಯಂತ ಬಿಜೆಪಿ ಅಲೆ, ಎರಡು ಲಕ್ಷ ಮತಗಳ ಅಂತರದಲ್ಲಿ ಶೋಭಾ ಗೆಲುವು: ಮಣಿರಾಜ್ ಶೆಟ್ಟಿ
ಕಾರ್ಕಳ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಕಳ ಕ್ಷೇತ್ರದಾದ್ಯಂತ ಈಗಾಗಲೇ ಹಲವು ಭಾರಿ ಪ್ರವಾಸ ಮಾಡಿದ್ದು, ಬಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕೆನ್ನುವ ನಿಟ್ಟಿನಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರು ಮತ್ತೊಮ್ಮೆ ಸಂಸದರಾಗಲಿದ್ದು, 2 ಲಕ್ಷಕ್ಕೂ ಅಧಿಕ ಮತಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಕಾರ್ಕಳ ಕ್ಷೇತ್ರವೊಂದರಲ್ಲೇ ಸುಮಾರು 50 ಸಾವಿರಕ್ಕೂ ಅಧಿಕ ಬಹುಮತ ಬರಲಿದೆ ಎಂದು ಕ್ಷೇತ್ರಾಧ್ಯಕ್ಚ ಮಣಿರಾಜ್ ಶೆಟ್ಟಿ ಅವರು ಪ್ರಕಟನೆಯಲ್ಲಿ […]