ದಾಹ ನೀಗಿಸುವ ಅಮೃತ:ಅಂಕಿತಾ ಗುರು ಕಾಪು ಕ್ಲಿಕ್ಕಿಸಿದ ಚಿತ್ರ
ಅಂಕಿತಾ ಗುರು ಕಾಪು ವೃತ್ತಿಪರ ಛಾಯಾಗ್ರಾಹಕರು. ಉಡುಪಿ ಜಿಲ್ಲೆಯ ಕಾಪು ನಿವಾಸಿ.ಅವರು ಕ್ಲಿಕ್ಕಿಸಿದ ಚಿತ್ರ “ದಾಹ ನೀಗಿಸುವ ಅಮೃತ “
ಮತದಾರರ ಸಹಾಯವಾಣಿ 1950 ದ ನೆರವು ಪಡೆಯಿರಿ
ಮನೆಯಲ್ಲಿ ಅಂಗವಿಕಲರು, ಹಿರಿಯ ನಾಗರೀಕರು ಇದ್ದಾರೆಯೇ, ಅವರನ್ನು ಮತಕೇಂದ್ರಕ್ಕೆ ಕರೆದುಕೊಂಡು ಹೋಗಿ ಮತದಾನ ಮಾಡಿಸಲು ತೊಂದರೆಯಿದೆಯೇ , ಚಿಂತೆ ಬಿಡಿ.. ಉಡುಪಿ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ 1950 ಗೆ ಮಾಹಿತಿ ನೀಡಿ.. ಹೌದು.. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲಾಡಳಿತದವತಿಯಿಂದ ಪ್ರಾರಂಭಿಸಲಾಗಿರುವ ಮತದಾರರ ಸಹಾಯವಾಣಿ ಕೇಂದ್ರದ ಮೂಲಕ, ಸುಗಮ ಚುನಾವಣೆ ಮತ್ತು ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಅಗತ್ಯವಿರುವ ನೆರವು ನೀಡಲಾಗುತ್ತಿದೆ. ಮತದಾರರ ಸಹಾಯವಾಣಿ ಸಂಖ್ಯೆ 1950 […]
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ: ಹೀಗೊಂದು ಅಪರೂಪದ ಆಮಂತ್ರಣ ಪತ್ರಿಕೆ
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು, ನಾಮ ಸಂವತ್ಸರ , ವಧೂ ವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ.. ಆದರೆ ಇಲ್ಲೋಂದು ವಿನೂತನ ವಿವಾಹ ಆಮಂತ್ರಣ ಪತ್ರಿಕೆ ಇದೆ, ಇದು 2019 ರ ಲೋಕಸಭಾ ಚುನಾವಣೆಯ ಮಹತ್ವವನ್ನು ಸಾರುತ್ತಿದೆ, ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶ ಎಲ್ಲ ಬಂಧು ಬಳಗವನ್ನು ತಲುಪುತ್ತಿದೆ. ಮೇ 1 ರಂದು ತಲ್ಲೂರು ಪಾರ್ತಿಕಟ್ಟೆ […]
ಕಾಂಗ್ರೆಸ್ ನದ್ದು ಪಾಕ್ ಪ್ರಧಾನಿ ಪ್ರಚೋದಿತ ಪ್ರಣಾಳಿಕೆ: ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ಗಂಭೀರ ಆರೋಪ
ಉಡುಪಿ: ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಲಂ 124ಎ ದೇಶದ್ರೋಹ ನಿಷೇಧ ಕಾಯ್ದೆಯನ್ನು ಸಂವಿಧಾನದಿಂದ ತೆಗೆದುಹಾಕುತ್ತೇವೆ. ಜಮ್ಮು–ಕಾಶ್ಮೀರದ ಸೈನಿಕರಿಗೆ ಕೊಟ್ಟಿರುವ ಸ್ವತಂತ್ರ ಅಧಿಕಾರವನ್ನು ಹಿಂಪಡೆಯುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿದ್ದಾರ ಅಥವಾ ಭಯೋತ್ಪಾದಕರು ಮಾಡಿಕೊಟ್ಟಿದ್ದಾರ ಎಂಬ ಸಂಶಯ ಮೂಡುತ್ತಿದೆ. ಕಾಂಗ್ರೆಸ್ ನಮ್ಮ ದೇಶವನ್ನು ಬಲಿಕೊಡಲು ಹೊರಟಿದೆ. ಕಾಶ್ಮೀರ ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಪಿತೂರಿ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದರು. ಉಡುಪಿ ಬಿಜೆಪಿ ಕಚೇರಿಯಲ್ಲಿ ಸೋಮವಾರ […]