‘ಚಪಾಕ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್, ಲಕ್ಷ್ಮಿ ಅಗರ್ ವಾಲ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಚಪಾಕ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳಿಗೆ ಹೃದಯ ಮುಟ್ಟುವಂತೆ ಮಾಡಿದೆ. ಹೆಣ್ಣಿಗೆ ಸೌಂದರ್ಯ ಎನ್ನುವುದು ಅತಿ ಮುಖ್ಯ. ಆ ಸೌಂದರ್ಯಕ್ಕೆ ಒಂದು ಸಾಸಿವೆಯಷ್ಟು ಕಪ್ಪು ಚುಕ್ಕೆ ಆದರೂ ಆಕೆಯ ಮನಸ್ಸು ತಡೆದುಕೊಳ್ಳುವುದಿಲ್ಲ. ಅಂತಹದ್ರಲ್ಲಿ ಆಸಿಡ್ ದಾಳಿಯಾದ್ರೆ ಆ ಹೆಣ್ಣಿನ ಸ್ಥಿತಿ ಹೇಗಾಗಬೇಡ. ತನಗೊಬ್ಬ ರಾಜಕುಮಾರ, ಒಂದು ಪುಟ್ಟ ಸಂಸಾರ, ಮಕ್ಕಳು ಹೀಗೆ ನೂರಾರು ಕನಸು ಹೊತ್ತು, ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದ್ದ ಯುವತಿ ಬಾಳಲ್ಲಿ ಆ ಪಾಪಿ ಯುವಕ ಮರೆಯಲಾಗದ ಅಧ್ಯಾಯವಾಗಿಬಿಟ್ಟ. […]
ಜರ್ಮನಿಯ ಮ್ಯೂನಿಚ್ನಲ್ಲಿ ದಂಪತಿಗಳ ಮೇಲೆ ಚೂರಿಯಿಂದ ಇರಿದ, ಕುಂದಾಪುರ ಮೂಲದ ಬಿ.ವಿ.ಪ್ರಶಾಂತ ಸಾವು
ಕುಂದಾಪುರ : ಜರ್ಮನಿಯ ಮ್ಯೂನಿಚ್ನಲ್ಲಿ ನೆಲೆಸಿರುವ ಉಡುಪಿ ಜಿಲ್ಲೆ ಕುಂದಾಪುರ ಮೂಲದ ಬಿ.ವಿ.ಪ್ರಶಾಂತ (51) ಹಾಗೂ ಸ್ಮೀತಾ (40) ದಂಪತಿಗಳ ಮೇಲೆ ಮಾ.29ರಂದು ಆಗಂತುಕನೊಬ್ಬ ಚೂರಿಯಿಂದ ಇರಿದ ಪರಿಣಾಮ ಪ್ರಶಾಂತ ಮೃತಪಟ್ಟು ಪತ್ನಿ ಸ್ಮೀತಾ ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಪ್ರಶಾಂತ ಅವರ ತಂದೆ ದಿ.ಬಿ.ಎನ್.ವೆಂಕಟರಮಣ ಹಾಗೂ ತಾಯಿ ವಿನಯ ಮೂಲತ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ವ್ಯವಹಾರ ಹಾಗೂ ಕೃಷಿ ಕಾರ್ಯಗಳಿಗಾಗಿ ಅವರು ಕುಟುಂಬ ಸಹಿತರಾಗಿ ಸಾಗರದಲ್ಲಿ ನೆಲೆಸಿದ್ದರು. ವೆಂಕಟರಮಣ ಅವರ ಪೂರ್ವಿಕರು ಕುಂದಾಪುರ ಸಮೀಪದ […]
ಚುನಾವಣಾ ಅಕ್ರಮ ತಿಳಿಸಲು ಸಿ ವಿಜಿಲ್ ಬಳಸಿ:ಅಕ್ರಮ ಎಸಗುವ ಜನಪ್ರತಿನಿಧಿಗಳನ್ನು ಶಿಕ್ಷಿಸಲು ಇಲ್ಲಿದೆ ಉಪಾಯ
ಚುನಾವಣೆಯಲ್ಲಿ ಯೋಗ್ಯ , ಪ್ರಾಮಾಣಿಕ ಅಭ್ಯರ್ಥಿ ಜಯ ಗಳಿಸಬೇಕು ಎನ್ನುವ ಅಭಿಲಾಷೆ ಹೊಂದಿರುವ ಮತದಾರರೇ , ತಮ್ಮ ಮುಂದೆಯೇ ಅಪ್ರಾಮಾಣಿಕ ವ್ಯಕ್ತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಾ, ಪ್ರಾಮಾಣಿಕ ಅಭ್ಯರ್ಥಿಯನ್ನು ಸೋಲಿಸಲು ಮಾಡುತ್ತಿರುವ ಅಕ್ರಮ ಚಟುವಟಿಕೆಗಳನ್ನು ಕಂಡು ಏನು ಮಾಡದೇ ಸುಮ್ಮನಿರುವಿರಾ? ಅಥವಾ ಈತನ ವಿರುದ್ದ ಯಾರಿಗೆ ದೂರು ನೀಡುವುದು, ನಾವು ನೀಡಿದ ದೂರಿನ ವಿರುದ್ದ ಸರಿಯಾದ ಕ್ರಮ ಕೈಗೊಳ್ಳಲು ಸಾಧ್ಯವೇ, ಅದೂ ತ್ವರಿತಗತಿಯಲ್ಲಿ ಸಾಧ್ಯವೇ ಎಂಬ ಗೊಂದಲದಲ್ಲಿದ್ದೀರಾ? ಚಿಂತೆ ಬಿಡಿ, ನಿಮಗಾಗಿ ಚುನಾವಣೆಯಲ್ಲಿ ಪ್ರಾಮಾಣಿಕ ಜನಪ್ರತಿನಿಧಿಗಳನ್ನು […]
ಕೋಟ :ಬನ್ನಾಡಿ ಬಳಿ ಗದ್ದೆಗೆ ಹರಡಿತು ಬೆಂಕಿ:
ಉಡುಪಿ: ತರಗೆಲೆಗಳಿಗೆ ಕೊಟ್ಟ ಬೆಂಕಿ ಗದ್ದೆಗೆ ಹರಡಿ , ಸ್ಥಳೀಯರು ಬೆಂಕಿನಂದಿಸಲು ಹರಸಾಹಸ ಪಟ್ಟ ಘಟನೆ ಇಲ್ಲಿನ ಕೋಟದ ಬನ್ನಾಡಿ ದೊಡ್ಡ ಗರಡಿಯ ಬಳಿ ಭಾನುವಾರ ಸಂಭವಿಸಿದೆ. ಗದ್ದೆಯಲ್ಲಿರುವ ತರಗೆಲೆಗಳಿಗೆ ಸ್ಥಳೀಯರು ಬೆಂಕಿ ಕೊಟ್ಟಿದ್ದರು. ಆ ಬೆಂಕಿ ಅವರ ಗಮನಕ್ಕೆ ಬಾರದಂತೆ ಇಡೀ ಗದ್ದೆಗೆ ಹರಡಿ, ಸುತ್ತಲೂ ಆತಂಕ ಸೃಷ್ಟಿಸಿತು. ಸ್ಥಳೀಯ ಯುವಕರು ಬೆಂಕಿ ನಂದಿಸಲು ಹರಸಾಹಸಪಟ್ಟು ಕೊನೆಗೆ ಅಗ್ನಿಶಾಮಕ ದಳದ ಸಿಬಂಧಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಬೇಸಿಗೆಯಲ್ಲಿ ಈ ತರದ ಘಟನೆಗಳು ಕೆಲವೆಡೆ […]
ಬಂಟ್ವಾಳ:ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವಾರ್ಷಿಕ ಮಹೋತ್ಸವ ಸಂಭ್ರಮ
ಬಂಟ್ವಾಳ : ತಾಲೂಕಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವಾರ್ಷಿಕ ಮಹೋತ್ಸವ ಅದ್ಧೂರಿಯಿಂದ ನಡೆಯಿತು.