ಹೆದ್ದಾರಿ ಕಾಮಗಾರಿ ಸ್ಥಗಿತ: ರಿಕ್ಷಾ ಚಾಲಕರಿಂದ ಎಸಿಗೆ ಮನವಿ
ಕುಂದಾಪುರ: ಕಳೆದ ಕೆಲ ದಿನಗಳಿಂದ ತಲ್ಲೂರು ಪೇಟೆಯಲ್ಲಿ ನಡೆಯುತ್ತಿದ್ದ ಚತುಷ್ಪಥ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಲ್ಲೂರು ರಿಕ್ಷಾ ಚಾಲಕರು ಕುಂದಾಪುರ ಸಹಾಯಕ ಆಯುಕ್ತ ಮಧುಕೇಶ್ವರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್ಬಿ ಕಂಪೆನಿ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗಳಿಗೆ ಮನ್ನಣೆ ಕೊಡದೆ ಅವೈಜ್ಞಾನಿಕ ಹಾಗೂ ವಿಳಂಬವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ವಾಹವ ಸವಾರರು, ಪಾದಚಾರಿಗಳು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ತೊಂದರೆಯಾಗಳಾಗುತ್ತಿದ್ದು, ತಲ್ಲೂರು ಜಂಕ್ಷನ್ನಲ್ಲಿ ಶೀಘ್ರ ರಸ್ತೆ ಕಾಮಗಾರಿ ನಡೆಸಬೇಕು […]
ಲೋಕಸಭಾ ಚುನಾವಣೆ- ಅನುಮತಿಯಿಲ್ಲದೇ ಜಾಹೀರಾತು ಪ್ರಸಾರಕ್ಕೆ ಅವಕಾಶವಿಲ್ಲ: ಡಿಸಿ
ಉಡುಪಿ: ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಯಾವುದೇ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಕುರಿತಾದ ಜಾಹೀರಾತುಗಳನ್ನು ಸ್ಥಳಿಯ ಕೇಬಲ್ ವಾಹಿನಿಗಳಲ್ಲಿ ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯ ಅನುಮತಿ ಅಗತ್ಯವಿದ್ದು, ಇದನ್ನು ಉಲ್ಲಂಘಿಸುವ ಚಾನೆಲ್ ಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ಥಳಿಯ ಕೇಬಲ್ ವಾಹಿನಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣೆಯಲ್ಲಿ […]
ಬೈಂದೂರು :ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶ್ರೀಮದ್ಭಗವದ್ಗೀತಾ ಭೋಧನಾ ಕಾರ್ಯಕ್ರಮ
ಕುಂದಾಪುರ: ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ವಠಾರದಲ್ಲಿ ಶನಿವಾರ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ನೇತೃತ್ವದಲ್ಲಿ ‘ಶ್ರೀಮದ್ಭಗವದ್ಗೀತಾ ಭೋದನಾ’ ಕಾರ್ಯಕ್ರಮ ಜರುಗಿತು. ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ, ಭಗವದ್ಗೀತೆಯ ಸಾಂಖ್ಯಾಯೋಗದಲ್ಲಿ ಬರುವ ಆತ್ಮ-ಪರಮಾತ್ಮ, ಕರ್ತವ್ಯ, ಧರ್ಮ ಹಾಗೂ ಸ್ಥಿತಪ್ರಜ್ಞತೆಯ ಅರ್ಥ ವಿವರಗಳನ್ನು ಬೋದನಾ ವಿವಿಧ ದೃಷ್ಟಾಂತಗಳ ಮೂಲಕ ಅದರ ಮಹತ್ವವನ್ನು ತಿಳಿಸಿದರು.ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವದ್ಗೀತೆಯಲ್ಲಿನ ತತ್ವ ಸಂದೇಶಗಳನ್ನು ಅರಿತು ಬದುಕಿನಲ್ಲಿ […]