ಬೈಂದೂರು :ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶ್ರೀಮದ್ಭಗವದ್ಗೀತಾ ಭೋಧನಾ ಕಾರ್ಯಕ್ರಮ

ಕುಂದಾಪುರ: ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ವಠಾರದಲ್ಲಿ ಶನಿವಾರ ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ನೇತೃತ್ವದಲ್ಲಿ ‘ಶ್ರೀಮದ್ಭಗವದ್ಗೀತಾ ಭೋದನಾ’ ಕಾರ್ಯಕ್ರಮ ಜರುಗಿತು.
ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ, ಭಗವದ್ಗೀತೆಯ ಸಾಂಖ್ಯಾಯೋಗದಲ್ಲಿ ಬರುವ ಆತ್ಮ-ಪರಮಾತ್ಮ, ಕರ್ತವ್ಯ, ಧರ್ಮ ಹಾಗೂ ಸ್ಥಿತಪ್ರಜ್ಞತೆಯ ಅರ್ಥ ವಿವರಗಳನ್ನು ಬೋದನಾ ವಿವಿಧ ದೃಷ್ಟಾಂತಗಳ ಮೂಲಕ ಅದರ ಮಹತ್ವವನ್ನು ತಿಳಿಸಿದರು.
ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವದ್ಗೀತೆಯಲ್ಲಿನ ತತ್ವ ಸಂದೇಶಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಾರ್ಥಕ್ಯದ ಕ್ಷಣದ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಪ್ರತಿ ಶನಿವಾರ ನಡೆಯುತ್ತಿರುವ ಭೋದನಾ ಕಾರ್ಯಕ್ರಮದಲ್ಲಿ ಶ್ರೀ ರಾಮಕ್ಷತ್ರಿಯ ಮಾತೃ ಮಂಡಳಿ ಸದಸ್ಯರು ಹಾಗೂ ಇತರರು ಸತ್ಸಂಗದಲ್ಲಿ ಭಾಗವಹಿಸಿದ್ದರು. ಮುಂದಿನ ವಾರ ಭಗವದ್ಗೀತೆ ಮೂರನೇ ಕರ್ಮಯೋಗದ ಭೋದನೆ ನಡೆಯಲಿದೆ.