ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ನಿಧನ
ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಅವರು ಇಂದು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಕೆಲವು ಸಮಯಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ನಾಳೆ ಬೆಳಗ್ಗೆ 7 ಗಂಟೆಯಿಂದ 10 ರವರೆಗೆ ನಗರದ ಕದ್ರಿಕಂಬಳದಲ್ಲಿ ಇರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ. ಬಳಿಕ ಹುಟ್ಟೂರಾದ ವೇಣೂರಿಗೆ ಅವರ ಮೃತ ದೇಹವನ್ನು ಕೊಂಡೊಯ್ದು ಅಂತಿಮ ಸಂಸ್ಕಾರ ನೆರವೇರಿಸಲಾಗಿವುದು. ಅವರು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಿಮಾನಯಾನ ಖಾತೆ ಸಚಿವರಾಗಿ […]
ಕಾರ್ಕಳದಲ್ಲಿ ಈಶ್ವರೀಯ ವಿದ್ಯಾಲಯದ ಸೇವಾಕೇಂದ್ರದಿಂದ ಶಿವರಾತ್ರಿ ಉತ್ಸವ
ಕಾರ್ಕಳ : ನಿರ್ಮಲ ಪ್ರೇಮವನ್ನು ಹಂಚುವುದರ ಮೂಲಕ ವಿಶ್ವಮಾನವರಾಗಲು ಸಾಧ್ಯ. ಜಗತ್ತಿನಲ್ಲಿ ಋಣಾತ್ಮಕ ಶಕ್ತಿ ಹೆಚ್ಚುತ್ತಾ ಇರುವಂತೆ ನಾವು ಆತ್ಮಶಕ್ತಿಯನ್ನು ಜಾಗೃತಿ ಮಾಡಿಕೊಂಡು ಮುನ್ನಡೆದರೆ ಮಾತ್ರ ವಿಶ್ವಮಾನವತ್ವ ದೊರೆಯುತ್ತದೆ. ಆತ್ಮಶಕ್ತಿ ಜಾಗೃತಿಗೆ ರಾಜಯೋಗ ಶಿಕ್ಷಣ ಪರಿಹಾರವಾಗಬಲ್ಲದು ಎಂದು ಶಿಕ್ಷಕ ಮತ್ತು ಜೇಸೀಸ್ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಕೆ. ಅವರು ಅಭಿಪ್ರಾಯಪಟ್ಟರು. ಅವರು ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದ ಕಾರ್ಕಳ ಸೇವಾಕೇಂದ್ರದ ವತಿಯಿಂದ ರವಿವಾರ ಇಲ್ಲಿನ ಆನೆಕೆರೆ ಸದ್ಯೋಜಾತ ಪಾರ್ಕ್ ನಲ್ಲಿ ಆಚರಿಸಿದ ಶಿವರಾತ್ರಿ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ […]
ಶಿವ-ಪಾರ್ವತಿಯಂತಹ “LOVE ಲಿ ಜೋಡಿ”ಗಳು ಬಹುಮಾನಗಳೊಂದಿಗೆ ಸೆರೆಯಾದ ಖುಷಿಯ ಕ್ಷಣ ಇಲ್ಲಿದೆ ನೋಡಿ
ಉಡುಪಿ ಎಕ್ಸ್ ಪ್ರೆಸ್ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಲವ್ಲೀ ಜೋಡಿ ಫೋಟೋ ಸ್ಫರ್ಧೆಯ ವಿಜೇತರಿಗೆ ಇತ್ತೀಚೆಗೆ ಬಹುಮಾನಗಳನ್ನು ವಿತರಿಸಲಾಯಿತು. ಆ ಲವ್ಲೀ ಜೋಡಿಗಳು ಬಹುಮಾನಗಳ ಜೊತೆಯಾಗಿ ಸಂಭ್ರಮಿಸಿದ ಚೆಂದದ ಚಿತ್ರಗಳು ಇಲ್ಲಿವೆ. ಜೋಡಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು.