ಕುಡಿಯುವ ನೀರು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ದಿನಕರ ಬಾಬು
ಉಡುಪಿ: ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಂಡಿರುವ ಎಲ್ಲಾ ಕುಡಿಯುವ ನೀರು ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ಒಳಗೆ ಪೂರ್ಣಗೊಳಿಸಿ, ಯಾವುದೇ ಕಾಮಗಾರಿಗಳನ್ನು ಬಾಕಿ ಇಡಬೇಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ವೇಳೆಗೆ […]
ಅಭಿನಂದನ್ ಗಾಗಿ ಪ್ರಾರ್ಥಿಸುತ್ತಿದೆ ಭಾರತ:bring back ಅಭಿನಂದನ್ ಅಭಿಯಾನಕ್ಕೆ ದೇಶಾದ್ಯಂತ ಭರ್ಜರಿ ಬೆಂಬಲ
ಪಾಕಿಸ್ತಾನದ ವಶದಲ್ಲಿರುವ ಮಿಗ್ ಯುದ್ದ ವಿಮಾನದ ಪೈಲಟ್ ಅಭಿನಂದನ್ ವರ್ತಮಾನ್ ಅವರಿಗಾಗಿ ಇದೀಗ ದೇಶ ಪ್ರಾರ್ಥಿಸುತ್ತಿದೆ. ವರ್ತಮಾನ್ ಅವರು ಕಾಣೆಯಾಗಿರುವ ಕುರಿತು ಸೇನಾ ಮುಖ್ಯಸ್ಥರು ಕೂಡ ಇದೀಗ ಅಧೀಕೃತ ಮಾಹಿತಿ ನೀಡಿದ್ದು,ಅಭಿನಂದನ್ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲೇಬೇಕು.ನಾವು ಅಭಿನಂದನ್ ಜೊತೆಗಿದ್ದೇವೆ.ಎನ್ನುವ ಅಭಿಯಾನ ವಾಟ್ಸಾಸ್,ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.ಇದೀಗ ಇಡೀ ದೇಶದಲ್ಲಿ ಅಭಿನಂದನ್ ಹೆಸರು ಕೇಳಿಬರುತ್ತಿದ್ದು, ಅಭಿನಂದನ್ ಸುರಕ್ಷಿತವಾಗಿ ಮರಳಿ ಬರಲಿ ಎನ್ನುವ ಪ್ರಾರ್ಥನೆಯನ್ನು ಇಡೀ ದೇಶ ಸಲ್ಲಿಸುತ್ತಿದೆ.ವೀ ಆರ್ […]
ಮೂರು ದಶಕಗಳ ಟೆನ್ನಿಸ್ ಕ್ರಿಕೆಟ್ ಸೇವೆಯಲ್ಲಿ:ಕರ್ನಾಟಕದ ಹರ್ಷ ಭೋಗ್ಲೆ “ಶಿವನಾರಾಯಣ ಐತಾಳ್ ಕೋಟ “
90 ರ ದಶಕ ಟೆನ್ನಿಸ್ ಬಾಲ್ ಕ್ರಿಕೆಟ್ ನ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅಂದಿನಿಂದ ಮೊದಲ್ಗೊಂಡು ಇಂದಿನ ವರೆಗೆ ಸತತ ಮೂರು ದಶಕಗಳ ಕಾಲ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಟೆನ್ನಿಸ್ ಬಾಲ್ ವೀಕ್ಷಕ ವಿವರಣೆಗೆ ಚುರುಕು ಮುಟ್ಟಿಸಿ, ಹಲವಾರು ರೋಚಕ, ರೋಮಾಂಚಕಾರಿ ಪಂದ್ಯಾಟಗಳಲ್ಲಿ ವೀಕ್ಷಕ ವಿವರಣೆಯ ಚುಕ್ಕಾಣಿ ಹಿಡಿದು ವಿದೇಶದಲ್ಲಿ(ಅಂಪಾಯರಿಂಗ್)ನಲ್ಲಿ ಪ್ರಸಿದ್ದಿ ಪಡೆದ ಕರ್ನಾಟಕ ರಾಜ್ಯದ ಏಕಮಾತ್ರ ವೀಕ್ಷಕ ವಿವರಣೆಕಾರ, ಕ್ರಿಕೆಟ್ ವಿಶ್ಲೇಷಕ, ಕರ್ನಾಟಕದ ಹರ್ಷ ಭೋಗ್ಲೆ ನಮ್ಮೂರಿನ ಹೆಮ್ಮೆಯ ಶಿವನಾರಾಯಣ ಐತಾಳ್ ಕೋಟ. ಪ್ರಾರಂಭದಲ್ಲಿ ಕೋಟ, […]