ಬಿಜೆಪಿ ಗುಂಡಿಬೈಲ್ ಮತ್ತು ನಮೋ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಜಂಟಿ ಆಶ್ರಯದಲ್ಲಿ ಉಚಿತ ವಿದ್ಯುತ್ ಸಂಪರ್ಕ

ಉಡುಪಿ ಜಿಲ್ಲೆಯ ಗುಂಡಿಬೈಲ್ ವಾರ್ಡ್‌ನಲ್ಲಿ ಇಂದು ವಿದ್ಯುತ್ ವಂಚಿತ ಕುಟುಂಬಕ್ಕೆ ಮತ್ತು ಗೋಶಾಲೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಬಿಜೆಪಿ ಗುಂಡಿಬೈಲ್ ವಾರ್ಡ್‌ ಮತ್ತು ನಮೋ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ತಂಡವು ಜನಪರ ಸೇವೆಗೆ ಸಾಕ್ಷಿಯಾಯಿತು. ಮಲ್ಲಂಪಳ್ಳಿ ನಿವಾಸಿ ಶ್ರೀಮತಿ ಕಮಲ ಎಂಬವರ ಮನೆಗೆ ಮತ್ತು ಸಮೀಪದ ಗೋಶಾಲೆಗೆ ಉಚಿತ ವಿದ್ಯುತ್ ಸಂಪರ್ಕ, ನಳ್ಳಿ ನೀರಿನ ವ್ಯವಸ್ಥೆಯ ಉದ್ಘಾಟನೆ, ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ ಹಾಗೂ ಗುಂಡಿಬೈಲ್ ವಾರ್ಡ್‌ ಬಿಜೆಪಿಯ ಕಛೇರಿ ಉದ್ಘಾಟನಾ ಸಮಾರಂಭವನ್ನು ರಘುಪತಿ ಭಟ್ […]

ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನ ಬೆಂಬಲ ಇಲ್ಲ: ಮುತಾಲಿಕ್

ಉಡುಪಿ: ಶ್ರೀರಾಮ ಸೇನೆ ಹಾಗೂ ನಾನು ರಾಜಕೀಯದಿಂದ ದೂರ ಸರಿದಾಗಿದೆ. ನಾವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನ ಬೆಂಬಲ ಇಲ್ಲ. ಗೂಂಡಾಗಿರಿ ಮತ್ತು ದುಡ್ಡೇ ಪ್ರಮುಖ ಮಾನದಂಡವಾಗಿದೆ. ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುವುದಾಗಿ ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ರಾಜಕೀಯ ಕುಲಗೆಟ್ಟುಹೋಗಿದೆ. ಮೂರು ರಾಜಕೀಯ ಪಕ್ಷ ಗಳನ್ನು ಧಿಕ್ಕರಿಸಿ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ […]

ಕಾಪು ಮಜೂರು: ಬೆಂಕಿ ಹತ್ತಿಕೊಂಡಿದ್ದ ಶವವೊಂದು ಪತ್ತೆ

ಉಡುಪಿ: ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ಮಜೂರು ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದ ಶವವೊಂದು ಪತ್ತೆಯಾಗಿದ್ದು ಸ್ಥಳಿಯರ ತೀವ್ರ ಆತಂಕಕ್ಕೆ ಕಾರಣವಾಗಿದೆ.   ಬೆಳಿಗ್ಗೆ ೯ ಗಂಟೆಗೆ ಮಜೂರು ರೇಲ್ವೆ ಬ್ರಿಡ್ಜ್ ಪಕ್ಕದ ಪೊದೆಯಲ್ಲಿ ಈ ಶವ ಪತ್ತೆಯಾಗಿದೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೋಲಿಸರು ಬೆಂಕಿಯನ್ನು ನಂದಿಸಿದರು. ಆದರೇ ಅದಾಗಲೇ ಗಂಡಸಿನ ಶವ ಗುರತು ಸಿಗದಷ್ಟು ಸುಟ್ಟ ಹೋಗಿತ್ತು. ಶವವನ್ನು ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ. […]

ಅಜ್ಜಿಗೆ ಕಾಯಕ,ಪುಟ್ಟನಿಗೆ ಕೌತುಕ:ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಚಿತ್ರ

   ಮಹೇಶ್ ದೇವಾಡಿಗ ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ.ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗದ ಜನ-ಜೀವನ, ಕೃಷಿ ಚಟುವಟಿಕೆಗಳು, ಸಾಂಪ್ರದಾಯಿಕ ಕ್ರೀಡೆ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಆಸಕ್ತಿ ಇರುವ ಮಹೇಶ್. ತಮ್ಮ ಚಿತ್ರಗಳಲ್ಲಿ ಅವುಗಳನ್ನು ಕ್ರಿಯಾಶೀಲವಾಗಿ ಸೆರೆಹಿಡಿಯುತ್ತಿದ್ದಾರೆ. ಮಹೇಶ್ ದೇವಾಡಿಗ:9844674895