ಕಲೆಗಾಗಿ ತುಡಿಯುವ ಮನಗಳು ಕಲಾವಿದರಿಗಾಗಿ ಮಿಡಿಯಲಿ

ಪರಶುರಾಮ ಸೃಷ್ಟಿಯ ಪುಣ್ಯದ ಭೂಮಿ ಕರಾವಳಿಯಲ್ಲಿ ಯಕ್ಷಗಾನ ಕಲೆ ದೇವ ಕಲೆಯಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಳಗಳು ಆರು ತಿಂಗಳು ನಿತ್ಯ ಯಕ್ಷಪ್ರದರ್ಶನವನ್ನು ನೀಡಿ ಪ್ರೇಕ್ಷಕ ಮಹಾಶಯನ ಮನತಣಿಸುತ್ತವೆ ಹಾಗೂ ಯಕ್ಷಾಭಿಮಾನಿಗಳು ಕಗ್ಗತ್ತಲ ರಾತ್ರಿಗಳಲ್ಲಿ ಕಿಲೋ ಮೀಟರ್ಗಟ್ಟಲೆ ಸುತ್ತಾಡಿ ಯಕ್ಷ ಪ್ರದರ್ಶನವನ್ನು ನೋಡಿ ಖುಷಿಪಡುತ್ತಾರೆ. ಕಲೆಯೊಂದು ಕರಾವಳಿಗನ ಮನಸ್ಸು-ನರನಾಡಿಗಳಲ್ಲಿ ಆಳವಾಗಿ ಬೇರೂರಿರುವುದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಅದೇ ರೀತಿ ಯಕ್ಷಗಾನ ಇಷ್ಟೊಂದು ಶ್ರೀಮಂತವಾಗಿ ಬೆಳೆಯಲು ಪ್ರಮುಖ ಕಾರಣ ಕಲಾವಿದರುಗಳ ಪರಿಶ್ರಮ. […]