ಸಿದ್ದಗಂಗಾ ಶ್ರೀಗಳು ಎಂದೂ ಆರದ ಬೆಳಕು : ಎಲ್ಲರೊಳಗೆ ಅವರಿನ್ನೂ ಬದುಕಿದ್ದಾರೆ.
ಭರವಸೆಯ ಚೇತನ, ಜೀವನಪ್ರೀತಿಯ ಅಕ್ಷಯ ನಿಧಿಯಾಗಿದ್ದ ತುಮಕೂರಿನ ಸಿದ್ದಗಂಗಾ ಸ್ವಾಮೀಜಿಗಳು ಇಂದು ಲಿಂಗೈಕ್ಯರಾಗಿದ್ದಾರೆ. ನಾಡಿನ ಪ್ರತೀ ಜೀವಗಳೂ, ಮಠದಲ್ಲಿ ಕಲಿಯುತ್ತಿರುವ ಪುಟ್ಟ ಮಕ್ಕಳ ಮುಗ್ದ ಕಂಗಳೂ ಒಂದೇ ಸಮನೆ ಸ್ವಾಮೀಜಿ ಲಿಂಗೈಕ್ಯರಾದರು ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರು ಸುರಿಸುತ್ತಿವೆ.ಮಠದಲ್ಲಿನ ಇಂಚಿಂಚೂ ತಾವು ತಬ್ಬಲಿಯಾದೆವು ಎನ್ನುವಂತೆ ಮೌನಕ್ಕೆ ಜಾರಿವೆ,.ನಾಡೀಗ ಶಾಂತವಾಗಿದೆ. ಪುಟ್ಟ ಮಕ್ಕಳ ನಡುವೆ ಸ್ವಾಮೀಜಿ ಇನ್ನೂ ಬದುಕಿದ್ದಾರೆ. ಶಿವಕುಮಾರ ಸ್ವಾಮೀಜಿ ಎಂದೂ ಆರದ ಬೆಳಕು,ಮಠದಲ್ಲಿ ಅವರನ್ನು ಒಮ್ಮೆ ನೋಡಿದರೆ ಸಾಕು, ನಮ್ಮ ಜೀವನ ಪ್ರೀತಿ ಹೆಚ್ಚಾಗುತ್ತಿತ್ತು.ಖುಷಿಯಿಂದ ಬದುಕುವ […]