ಸಿದ್ದಗಂಗಾ ಶ್ರೀಗಳು ಎಂದೂ ಆರದ ಬೆಳಕು : ಎಲ್ಲರೊಳಗೆ ಅವರಿನ್ನೂ ಬದುಕಿದ್ದಾರೆ.

ಭರವಸೆಯ ಚೇತನ, ಜೀವನಪ್ರೀತಿಯ ಅಕ್ಷಯ ನಿಧಿಯಾಗಿದ್ದ ತುಮಕೂರಿನ ಸಿದ್ದಗಂಗಾ ಸ್ವಾಮೀಜಿಗಳು ಇಂದು ಲಿಂಗೈಕ್ಯರಾಗಿದ್ದಾರೆ.  ನಾಡಿನ ಪ್ರತೀ ಜೀವಗಳೂ, ಮಠದಲ್ಲಿ ಕಲಿಯುತ್ತಿರುವ ಪುಟ್ಟ ಮಕ್ಕಳ ಮುಗ್ದ ಕಂಗಳೂ ಒಂದೇ ಸಮನೆ ಸ್ವಾಮೀಜಿ ಲಿಂಗೈಕ್ಯರಾದರು ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರು ಸುರಿಸುತ್ತಿವೆ.ಮಠದಲ್ಲಿನ ಇಂಚಿಂಚೂ ತಾವು ತಬ್ಬಲಿಯಾದೆವು ಎನ್ನುವಂತೆ ಮೌನಕ್ಕೆ ಜಾರಿವೆ,.ನಾಡೀಗ ಶಾಂತವಾಗಿದೆ.

ಪುಟ್ಟ ಮಕ್ಕಳ ನಡುವೆ ಸ್ವಾಮೀಜಿ ಇನ್ನೂ ಬದುಕಿದ್ದಾರೆ.

ಶಿವಕುಮಾರ ಸ್ವಾಮೀಜಿ ಎಂದೂ ಆರದ ಬೆಳಕು,ಮಠದಲ್ಲಿ ಅವರನ್ನು ಒಮ್ಮೆ ನೋಡಿದರೆ ಸಾಕು, ನಮ್ಮ ಜೀವನ ಪ್ರೀತಿ ಹೆಚ್ಚಾಗುತ್ತಿತ್ತು.ಖುಷಿಯಿಂದ ಬದುಕುವ ಹಂಬಲ ಜಾಸ್ತಿಯಾಗುತ್ತಿತ್ತು.ತುಮಕೂರಿನ ಮಠದ ಆವರಣಕ್ಕೆ ಕಾಲಿಟ್ಟರೆ, ಅಲ್ಲಿ ಅದೇನೋ ಹೊಸತಾದ ಬದುಕು ಸಿಕ್ಕಂತೆ ಅನ್ನಿಸುತ್ತಿದ್ದರೆ ಅದು ಸ್ವಾಮೀಜಿಗಳಿಂದ.

ಅಲ್ಲಿರುವ ಹಕ್ಕಿಗಳು,ಸಾಕುಪ್ರಾಣಿಗಳು, ಅಂಬಾ ಎಂದು ಕೂಗುತ್ತಿರುವ ದನಗಳ ಕಂಗಳಲ್ಲೂ ಸ್ವಾಮೀಜಿಯ ಪ್ರೀತಿ ಕಾಣಿಸುತ್ತಿತ್ತು,.ಸ್ವಾಮೀಜಿ ನಡೆದಾಡುವಾಗ ಅವುಗಳು ತಮ್ಮ ದೇವರೇ ಬಂದರು ಎನ್ನುವಂತೆ ನಲಿದಾಡುತ್ತಿತ್ತು.ಸಮಾನತೆ,ಗೌರವ,ಶ್ರಮ ಹಾಗೂ ನಿಜವಾದ ಶಿಕ್ಷಣದಿಂದ ಲಕ್ಷಾಂತರ ಮಕ್ಕಳಿಗೆ ಜೀವನಪಾಠ ಹೇಳಿಕೊಟ್ಟ ಸ್ವಾಮೀಜಿಗಳು ನಿಜವಾದ ಲೋಕಶಿಕ್ಷಣ ನೀಡಿ ಜಗವನ್ನು ಪೊರೆದ ಅಧಮ್ಯ ಗುರುಗಳು. ತಮ್ಮ ಗುರುವನ್ನು ಕಳೆದುಕೊಂಡ ಶಿಷ್ಯರ ಕಣ್ಣುಗಳಿಂದ ಇವತ್ತು ಹನಿ ಮೂಡುತ್ತಿದೆ ಅಂದರೆ, ಸ್ವಾಮೀಜಿಯವರ ವ್ಯಕ್ತಿತ್ವ ಅವರನ್ನು ಎಷ್ಟು ಪ್ರಭಾವಿಸಿರಬೇಡ ನೀವೇ ಯೋಚಿಸಿ,

ಸ್ವಾಮೀಜಿಯವರ ದೇಹ ಲಿಂಗೈಕ್ಯವಾದರೂ ಅವರ ನಗು, ಜೀವನಪ್ರೀತಿ,ಆದರ್ಶ ಇವೆಲ್ಲಾ ತುಮಕೂರಿನ ಪುಟ್ಟ ಮಕ್ಕಳ ಜೊತೆಯಲ್ಲಿಯೇ ಇದೆ,ಸ್ವಾಮೀಜಿ ಎಲ್ಲರೊಳಗೂ ಜೀವಂತವಾಗಿದ್ದಾರೆ, ಎಂದೂ ಆರದ ಬೆಳಕಿನಂತೆ ಮತ್ತೆ ಮತ್ತೆ ಎಲ್ಲರಿಗೂ ಬೆಳಕು ಕೊಡುತ್ತ ದೂರದಿಂದಲೇ ಪೊರೆಯುತ್ತಾರೆ ಎನ್ನುವ ನಂಬಿಕೆಯೇ ಭರವಸೆ.