ಕಾರ್ಕಳದಲ್ಲಿ ಎರಡು ಮಂಗಗಳ ಶವ ಪತ್ತೆ
ಕಾರ್ಕಳ: ತಾಲೂಕಿನ ಕುಕ್ಕುಂದೂರು ಅಯ್ಯಪ್ಪ ನಗರ ಹಾಗೂ ನಕ್ರೆಯಲ್ಲಿ ಬುಧವಾರ ಎರಡು ಮಂಗಗಳ ಶವ ಪತ್ತೆಯಾಗಿದ್ದು, ಕಾರ್ಕಳದಲ್ಲೂ ಮಂಗನ ಕಾಯಿಲೆಯ ಭೀತಿ ಆವರಿಸಿದೆ. ಕುಂದಾಪುರ ಭಾಗದಲ್ಲಿ ಸರಣಿ ಸಾವಿಗೀಡಾಗುತ್ತಿದ್ದ ಮಂಗಗಳ ಸಾವು ಸದ್ಯ ಕಾರ್ಕಳ ಭಾಗಕ್ಕೂ ಹಬ್ಬಿದೆ. ಬುಧವಾರ ದೊರೆತ ಎರಡು ಶವಗಳ ಪೈಕಿ ಒಂದನ್ನು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಈಗಾಗಲೇ ತಾಲೂಕಿನ ಹಿರ್ಗಾನ, ಈದು, ಮಾಳ ಮೊದಲಾದ ಭಾಗದಲ್ಲಿ ಮಂಗಗಳ ಶವ ಪತ್ತೆಯಾಗಿದ್ದು, ಐದಾರು ಮಂಗಗಳ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, […]
ವೈಭವದ ಸಾಲಿಗ್ರಾಮ ಜಾತ್ರಾ ಮಹೋತ್ಸವ : ಫೋಟೋ ಗ್ಯಾಲರಿ
ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮ: ಫೋಟೋ ಗ್ಯಾಲರಿ ಸುಮಾರು 900 -1000 ವರ್ಷಗಳಿಂದ ತನ್ನದೇ ಆದ ಇತಿಹಾಸವನ್ನು ಹೊಂದಿದ ಹಾಗೂ ನಮ್ಮ ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ಹಲವು ನರಸಿಂಹ ಕ್ಷೇತ್ರಗಳಲ್ಲಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನವು ಬಹು ಮುಖ್ಯ ಕಾರಣಿಕವಾದುದು. ಇಂದು ಶ್ರೀ ಕ್ಷೇತ್ರಕ್ಕೆ ಹಬ್ಬದ ಸಂಭ್ರಮ, ಸಾಲಿಗ್ರಾಮ ಜಾತ್ರಾ ಮಹೋತ್ಸವ ಸಂದರ್ಭ ಸೆರೆ ಹಿಡಿದ ಕೆಲವು ಚಿತ್ರ ಚಿತ್ರ : ಅರುಣ್ ಫೋಟೋ ಪಿಕ್ಸ್ , ಕೋಟ (9945543012)