ಉಡುಪಿ: ಕಾರಿಗೆ ಬೆಂಕಿ ತಗುಲಿ ಅಪಾರ ನಷ್ಟ

ಉಡುಪಿ: ಇಲ್ಲಿನ ಗೀತಾಂಜಲಿ ಸಿಲ್ಕ್ ಬಟ್ಟೆ ಅಂಗಡಿ ಬಳಿ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರಿನ ಮುಂಭಾಗ ಸಂಪೂರ್ಣ ಸುಟ್ಟುಹೋದ ಘಟನೆ ಭಾನುವಾರ ಸಂಭವಿಸಿದೆ. ಕಾರು ಕಳಸದ ವಿದ್ಯಾನಂದ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅವರು ಬಟ್ಟೆ ಖರೀದಿಸಲು ಕಳಸದಿಂದ ಇಲ್ಲಿಗೆ ಆಗಮಿಸಿದ್ದರು. ಬಟ್ಟೆ ಖರೀದಿಸಿ ಹೊರಡುವ ವೇಳೆ ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣವೇ ಏಕಾಏಕಿಯಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು, ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸಿದೆ.

ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ:ಮಹಾರಾಷ್ಟ್ರದ ಮಾಲ್ವಾದಲ್ಲಿ ನಿರಂತರ ತನಿಖೆ

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಸುವರ್ಣ ತ್ರಿಭುಜ ಬೋಟಲ್ಲಿ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ನಾಪತ್ತೆಯಾದವರ ಬಗ್ಗೆ ಒಂದು ಸುಳಿವು ಕೂಡ ಸಿಕ್ಕಿಲ್ಲ. ಡಿಸೆಂಬರ್ 15 ರಂದು ಮಲ್ಪೆಯ `ಸುವರ್ಣ ತ್ರಿಭುಜ’ ಬೋಟು ಸಂಪರ್ಕ ಕಡಿತವಾಗಿತ್ತು. ಬಳಿಕ ಆ ಭಾಗದಲ್ಲಿ ಸಂಚರಿಸಿದ ಎಲ್ಲಾ ಹಡಗುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಒಂದು ಮೂಲದ ಪ್ರಕಾರ ಆ ಭಾಗದಲ್ಲಿ ಹಾದು ಹೋದ ಹಡಗಿನ ಮೂಲಕ ಒಂದು ವಯರ್ ಲೆಸ್ ಮೆಸೇಜ್ […]

ಮಹೇಂದ್ರ ಬೊಲೇರೊ ವಾಹನ ಶಾಂಭವಿ ನದಿಗೆ ಬಿದ್ದು, ಓರ್ವ ಮಹಿಳೆ ಸಾವು

ಕಾರ್ಕಳ: ಮುಂಡ್ಕೂರು ಗ್ರಾಮದ ಸಂಕಲಕರಿಯ ಶಾಂಭವಿ ನದಿಗೆ ಮಹೇಂದ್ರ ಬೊಲೇರೊ ವಾಹನ ನಿಯಂತ್ರಣ ತಪ್ಪಿ  ಕೆಳಗೆ ಬಿದ್ದು  ಸಾವನ್ನಪ್ಪಿದ ಘಟನೆ ಜ.12ರಂದು ಬೆಳಗ್ಗೆ ನಡೆದಿದೆ. ವಾಹನದಲ್ಲಿ ಒಂದೇ ಮನೆಯ 4 ಜನ ಪ್ರಯಾಣ ಮಾಡುತ್ತಿದ್ದು. ಚಾಲಕನ ನಿಯಂತ್ರಣ ತಪ್ಪಿ ವಾಹನ ನದಿಗೆ ಬಿದ್ದಿದೆ. ನದಿಗೆ ಬಿದ್ದ ರಭಸದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ 3 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರನ್ನು ಕಾರ್ಕಳ ಬೋಳ ನಿವಾಸಿ ಡೈನಾ ಮಸ್ಕರೇನಸ್(44) ಎಂದು ಗುರುತಿಸಲಾಗಿದೆ. ಜೀಪು ಚಲಾಯಿಸುತ್ತಿದ್ದ ಮೃತರ ಪತಿ ಸ್ಟಾನಿ […]