ಕುಂದಾಪುರ:ಆರ್. ಎನ್. ಶೆಟ್ಟಿ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ
ಕುಂದಾಪುರ: ದೇಶ ಇಂದು ಒಳ್ಳೆಯ ನಾಯಕರು, ಅಧಿಕಾರಿಗಳ ಬರುವಿಕೆಯನ್ನು ಕಾಯುತ್ತಿದೆ. ನಮ್ಮ ದೇಶಕ್ಕೆ ಜನರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಅಧಿಕಾರಿಗಳ ಅಗತ್ಯ ಇದೆ. ಸಮಾನತೆ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೆ ಬೆಲೆ ಕೊಡುವ ಜಾತಿ, ಧರ್ಮ ಮೀರಿ ಕೆಲಸ ಮಾಡಿ ದೇಶದ ಏಳಿಗೆಗಾಗಿ ಪ್ರಯತ್ನಿಸುವ ಯುವಕರ ಅಗತ್ಯತೆ ಈ ದೇಶಕ್ಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ| ಪಿ.ಎಲ್ .ಧರ್ಮಾ ಹೇಳಿದರು. ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ […]
ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ: ಡಿ.16ರಿಂದ ಉತ್ಸವ
ಉಡುಪಿ: ಬಾರಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಡಿ. 16ರಿಂದ 20ರ ವರೆಗೆ ವಾರ್ಷಿಕ ಉತ್ಸವ ಜರಗಲಿದೆ. ಡಿ. 16ಕ್ಕೆ ಕೆಂಡ ಸೇವೆ ಡಿ. 17ಕ್ಕೆ ಢಕ್ಕೆಬಲಿ, ತುಲಾಭಾರ, ಅನ್ನಸಂತರ್ಪಣೆ, ತೆಪ್ಪೋತ್ಸವ ಡಿ. 18ಕ್ಕೆ ಗುರು ಪೀಠದಲ್ಲಿ ದೀಪಾರಾಧನೆ, ಡಿ. 19 ಕ್ಕೆ ಶ್ರೀ ನಾಗ ದರ್ಶನ, ಕೋಲ, ಡಿ. 20ರಂದು ದರ್ಶನ, ಪರಿವಾರ ದೈವಗಳ ಕೋಲ ಪ್ರಸಾದ ವಿತರಣೆ ನಡೆಯಲಿದೆ. ಡಿ. 16ರ ಸಂಜೆ ಯಕ್ಷಗಾನ, ಭಜನೆ, ಡಿ. 17ರ ಸಂಜೆ ಮೊಗವೀರ ಯುವಕ […]
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜನರಿಗೆ ಮೊದಲಿದ್ದಷ್ಟು ನಿರೀಕ್ಷೆ ಇಲ್ಲ : ಪೇಜಾವರ ಶ್ರೀ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನರಿಗೆ ಮೊದಲಿದ್ದಷ್ಟು ನಿರೀಕ್ಷೆ ಈಗ ಇಲ್ಲ. ದೇಶದಲ್ಲಿ ಜನರು ನಿರೀಕ್ಷಿಸಿದಷ್ಟು ಕೆಲಸ ಆಗಿಲ್ಲ. ನೋಟು ರದ್ದತಿಯ ಫಲ ಜನಸಾಮಾನ್ಯರಿಗೆ ಸಿಕ್ಕಿಲ್ಲ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಅವರು ಮಾತನಾಡಿದರು. ಪಂಚರಾಜ್ಯಗಳ ಫಲಿತಾಂಶ ಮೋದಿಗೆ ಎಚ್ಚರಿಕೆಯ ಗಂಟೆ. ಹಾಗಾಗಿ ಆರ್ಥಿಕ ಸುಧಾರಣೆ ಮತ್ತು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಆದ್ಯತೆ ಕೊಡಲಿ. ಮಂದಿರ ನಿರ್ಮಾಣವಾದರೆ ಹಿಂದೂ ಮತದಾರರ ಉತ್ಸಾಹ ಹೆಚ್ಚಾಗಬಹುದು ಎಂದು ಶ್ರೀಗಳು ಅಭಿಪ್ರಾಯಪಟ್ಟರು. ಪ್ರಧಾನಿ […]
ಮರಳು ದಿಬ್ಬ ತೆರವಿಗೆ ಅಡ್ಡಿ: ಜಿಲ್ಲಾಧಿಕಾರಿಗೆ ದೂರು
ಉಡುಪಿ: ತಾಲ್ಲೂಕಿನ ಉಪ್ಪೂರು ಧಕ್ಕೆಯಲ್ಲಿ ಮರಳು ದಿಬ್ಬ ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಕೆಲ ದುಷ್ಕರ್ಮಿಗಳು ಆಗಮಿಸಿ ಮರಳು ತೆರವು ಮಾಡದಂತೆ ಬೆದರಿಕೆ ಹಾಕಿ ಅಡ್ಡಿ ಪಡಿಸಿದ್ದಾರೆಂದು ಪರವಾನಗಿದಾರರೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದು, ಇದನ್ನು ಎಸ್ಪಿ ಅವರಿಗೆ ವರ್ಗಾಯಿಸಿ ಪರವಾನಗಿದಾರರಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ನಿಯಂತ್ರಣ ವಲಯ (ಸಿಆರ್ ಝಡ್) ದ ಮರಳು ದಿಬ್ಬ ತೆರವು ಕಾರ್ಯಕ್ಕೆ ಸಂಬಂಧಿಸಿ, ಈಗಾಗಲೇ 11 ಮಂದಿ […]