ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ರಂಗೋಲಿ

ಉಡುಪಿ: ಅಂಬಾಗಿಲು ವೈಶವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪಕ್ಷ್ಮೀ ಜಾಗರಣೆಯ ಪ್ರಯುಕ್ತ ಆದಿತ್ಯವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳಿಂದ ವಿಶ್ವರೂಪ ದರ್ಶನ ನಡೆಯಿತು.

ಈ ಸಂದರ್ಭದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ಮಾದರಿಯ ರಂಗೋಲಿಯು ಭಕ್ತಾಧಿಗಳ ಗಮನ ಸೆಳೆಯಿತು.

ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ಭಜನಾ ಕಾರ್ಯಕ್ರಮ ನಡೆಯಿತು. ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.

ವೈಶವಾಣಿ ಸಮಾಜದ ದೇವಳದ ಆಡಳಿತ ಮಂಡಳಿ ಸದಸ್ಯರು ಯುವಕ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.