ನಾಳೆ (ಏ.27) ರಾತ್ರಿಯಿಂದ 14 ದಿನ ಕರ್ನಾಟಕದಲ್ಲಿ ಕೋವಿಡ್ ಕರ್ಪ್ಯೂ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ತೀವ್ರಗತಿಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಏ. 27ರ ರಾತ್ರಿಯಿಂದ 14 ದಿನಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಗತ್ಯ ಸೇವೆಗಳು ಬಿಟ್ಟು ಉಳಿದೆಲ್ಲವೂ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ‌.
ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ‌ ವಸ್ತುಗಳನ್ನು ಖರೀದಿಗೆ ಅವಕಾಶ ಇರಲಿದೆ. ಗೂಡ್ಸ್ ವಾಹನ ಸಂಚಾರ ಎಂದಿನಂತಿದೆ ಇರಲಿದೆ. ಸಾರಿಗೆ ಬಸ್ ಸಂಚಾರ ಇರಲ್ಲ.