ಮೆಕ್ಕೆಕಟ್ಟು ಕುಲಾಲ್ ಸಂಘದ 14ನೇ ವಾರ್ಷಿಕ ಮಹಾಸಭೆ ಹಾಗೂ ಕ್ರೀಡೋತ್ಸವ ಸಂಭ್ರಮ

ಮೆಕ್ಕೆಕಟ್ಟು, ನ. 15: ಮೆಕ್ಕೆಕಟ್ಟು ಕುಲಾಲ್ ಸಂಘದ ವತಿಯಿಂದ 14ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಕ್ರೀಡೋತ್ಸವ–2026ರ ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಮೈದಾನದಲ್ಲಿ ನವೆಂಬರ್ 15ರಂದು ಕೃಷ್ಣ ಕುಲಾಲ್ ನೆಡೂರ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ನಡೆಯಿತು.

ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಶೇಡಿಕೋಡ್ಲು ವಿಠ್ಠಲ್ ಶೆಟ್ಟಿ ಅವರು ನೆರವೇರಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು , ಕುಲಾಲ್ ಸಮುದಾಯದ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿದರು.

ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದಿದ್ದು, ವಿದ್ಯಾರ್ಥಿಗಳು, ಪೋಷಕರು, ಸಂಘದ ಸದಸ್ಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಉದ್ಘಾಟನಾ ಸಮಾರಂಭದಲ್ಲಿ ಮಂದಾರ್ತಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಎಚ್ ಗಂಗಾಧರ ಶೆಟ್ಟಿ, ನಮಸ್ತೆ ಭಾರತ್ ಟ್ರಸ್ಟಿನ ಪ್ರವಾರ್ತಕರಾದ ಪ್ರಮೋದ್ ಕುಮಾರ್ ಮಂದಾರ್ತಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಲಕ್ಷ್ಮಿ ಎಕ್ಸ್ ಪ್ರೆಸ್ ಮಂದಾರ್ತಿ, ಶಾಲೆಯ ಮುಖ್ಯ್ಯಪಾಧ್ಯಾಯರಾದ ಸುದರ್ಶನ್ ಹೆರ್ಲೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಕೃಷ್ಣ, ಮೆಕ್ಕೆಕಟ್ಟು ಕುಲಾಲ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ನಾರಾಯಣ ಕುಲಾಲ್,ಹೆಗ್ಗುoಜೆ ಶಿರೂರುಗ್ರಾಮ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಕುಲಾಲ,ವೇದಿಕಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮಯದಲ್ಲಿ ಮೊಳಹಳ್ಳಿ ದಿನೇಶ್ ಹೆಗ್ಡೆ ಆಗಮಿಸಿ ಸಮುದಾಯದ ಎಲ್ಲಾ ಸದಸ್ಯರಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಿದವರಿಗೆ ಶುಭ ಹಾರೈಸಿದರು.ಹಾಗೂ ಕುಂದಾಪುರ ಕುಲಾಲ್ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಹಾಗೂ ಪಧಾಧಿಕಾರಿಗಳು, ಬೈಂದೂರು ವಿಧಾನ ಸಭಾ ಕುಲಾಲ್ ಸಂಘದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೃಷ್ಣ ಕುಲಾಲ್ ಅಧ್ಯಕ್ಷತೆಯನ್ನು ವಹಿಸಿದ್ದರು ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿ, ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದವರನ್ನು ಅಭಿನಂದಿಸಿದರು. ಸಂಘಟನೆಯ ಹಿರಿಯ ಸದಸ್ಯರಾದ ವಂಡಾರು ಅನಂತ್ ಕುಲಾಲ ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಮಂಜುನಾಥ್ ಹಿಲಿಯಾಣ,ರಾಜ್ಯ ಮಟ್ಟದಲ್ಲಿ ಸ್ಪರ್ದಿಸಿದ ಸಮುದಾಯದ ಇಬ್ಬರು ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಹಾಗೂ ಸದಸ್ಯರ ಮಕ್ಕಳಿಗೆ ಪ್ರೋತ್ಸಹ ಧನ ವಿತರಿಸಲಾಯಿತು. ವೇದಿಕಯಲ್ಲಿ ರಾಜ್ಯ ಕುಲಾಲ್ ಕುಂಬಾರ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್ ನೆಡೂರು, ಛತ್ರಪತಿ ಶಿವಾಜಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಧಿಕಾರಿ ಪ್ರಶಾಂತ್ ಶಿರೂರು, ಯುವ ಉದ್ಯಮಿ ಶಶಿ ಕುಲಾಲ್ ಶಿರೂರು ಹಂದಿಗದ್ದೆ,ಮಾತಾ ಪ್ರಿಂಟಿಂಗ್ ಮಾಲಕರಾದ ರವಿ ಕುಲಾಲ್,ಕಿರಣ್ ಕುಲಾಲ್ ಕಾಜ್ರಳ್ಳಿ, ಈಶ್ವರ್ ಕುಲಾಲ್ ನೈಲಾಡಿ, ಅಶೋಕ್ ಕುಲಾಲ್ ನೆಡೂರು,ಭಾಸ್ಕರ್ ಕುಲಾಲ್ ಕಂಪ,ಮನೀಶ್ ಕುಲಾಲ್ ನಿರ್ಜೆಡ್ದು, ಅರುಣ್ ಕುಲಾಲ್ ಕಕ್ಕು oಜೆ, ಕರುಣಾಕರ ಕುಲಾಲ್ ಮಂದಾರ್ತಿ, ಸತೀಶ್ ಕುಲಾಲ್ ಪ್ರಗತಿನಗರ, ಮೆಕ್ಕೆಕಟ್ಟು ಕುಲಾಲ್ ಸಂಘದ ಮಹಿಳಾ ಘಟಕದ ಅಧ್ಯಕ್ಷೇ ಶ್ರೀಮತಿ ಅನಿತಾ ನಾರಾಯಣ ಕುಲಾಲ್,ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್ ಶಿರಿಯಾರ, ಕೋಶಾಧಿಕಾರಿ ದಿನೇಶ್ ಕುಲಾಲ್ ಅವರ್ಸೆ ಮತ್ತು ಸಂಘದ ಪದಾಧಿಕಾರಿಗಳು, ಶಿಕ್ಷಕರು ಪೋಷಕರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಶಾಂತ್ ಶಿರೂರು ಸ್ವಾಗತಿಸಿ, ಮಂಜುನಾಥ್ ಹಿಲಿಯಣಾ ನಿರೂಪಿಸಿ ಮದ್ಯಾಹ್ನ ದ ಊಟ ದ ವ್ಯವಸ್ಥೆ ಯನ್ನು ಮಾಡಿದ ಮಂದಾರ್ತಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಯವರಿಗೆ ಸಭೆಯಲ್ಲಿ ವಂದಿಸಿದರು.