ಮಾಹೆ ಗಾಂಧಿಯನ್ ಸೆಂಟರ್ ನಿಂದ ಡಾ.ಟಿ.ಎಂ.ಎ ಪೈ ಅವರ 125ನೇ ಜನ್ಮದಿನ ಆಚರಣೆ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವತಿಯಿಂದ ಆಧುನಿಕ ಮಣಿಪಾಲದ ನಿರ್ಮಾತೃ, ಶಿಕ್ಷಣ ತಜ್ಞ ಡಾ.ಟಿ.ಎಂ.ಎ ಪೈ ಅವರ 125ನೇ ಜನ್ಮಶತಮಾನೋತ್ಸವವನ್ನು ಮಣಿಪಾಲದ ಅಕಾಡೆಮಿ ಹೈಯರ್ ಪ್ರೈಮರಿ ಸ್ಕೂಲ್ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಆಚರಿಸಲಾಯಿತು.

ವಿದ್ಯಾರ್ಥಿಗಳನ್ನು ಡಾ.ಟಿ.ಎಂ.ಎ. ಪೈ ವಾಸಿಸುತ್ತಿದ್ದ ಸ್ಮೃತಿ ಭವನಕ್ಕೆ ಕರೆದೊಯ್ದು, ಸ್ಮೃತಿ ಭವನದಲ್ಲಿರುವ ಛಾಯಾಚಿತ್ರಗಳು, ವೃತ್ತಪತ್ರಿಕೆ ತುಣುಕುಗಳು ಮತ್ತು ಇತರ ಆರ್ಕೈವಲ್ ವಸ್ತುಗಳ ಮೂಲಕ ಡಾ ಪೈ ಅವರ ಜೀವನ ಮತ್ತು ಬದುಕನ್ನು ಅವರಿಗೆ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಹೆಯ ಕ್ಯಾಂಪಸ್ ತೋರಿಸಲಾಯಿತು ಮತ್ತು ನಂತರ ತಾರಾಲಯಕ್ಕೆ ಕರೆದೊಯ್ಯಲಾಯಿತು, ಇದೇ ಸಂದರ್ಭದಲ್ಲಿ ಅವರು ಬಾಹ್ಯಾಕಾಶ ಯಾತ್ರೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ವೀಕ್ಷಿಸಿದರು.

ಜಿ.ಸಿ.ಪಿ.ಎ.ಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಪ್ರಾಂಶುಪಾಲೆ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.