ಹೆಬ್ರಿ: ಪೆರ್ಡೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ರೂ.10 ಲಕ್ಷ ಅನುದಾನ ಒದಗಿಸುತ್ತೇನೆ. ಸಂಘ ಸಂಸ್ಥೆಗಳು ಸಮಾಜದ ದೀನ ದುರ್ಬಲರ ಕಣ್ಣೀರು ಒರೆಸುವ ಕೆಲಸ ಮಾಡಬೇಕು’ ಎಂದು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.

ಪೆರ್ಡೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ನೂತನ ಸಮುದಾಯ ಭವನದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಯಜ್ಞ ಮಹಾಪೂಜೆ, 33ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಮುಖಂಡ ವಿನಯ ಕುಮಾರ್ ಸೊರಕೆ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿಗೆ ವಿಶೇಷ ಮನವಿ ಮಾಡಿ ಹೆಚ್ಚಿನ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ವೆಂಕಟರಮಣ ಅಚಾರ್ಯ ಬುಕ್ಕಿಗುಡ್ಡೆ ಅಧ್ಯಕ್ಷತೆ
ವಹಿಸಿದ್ದರು. ಗರ್ಧರಬೆಟ್ಟು ರಾಘವೇಂದ್ರ ಪುರೋಹಿತ್ ಕೀಳಿಂಜೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಅವರು ಸಮುದಾಯ ಭವನದ ಮುಖ್ಯವೇದಿಕೆಯ ಸಂಪೂರ್ಣ ವೆಚ್ಚ ನೀಡುವುದಾಗಿ ಘೋಷಿಸಿದರು. ವಿದ್ಯಾರ್ಥಿವೇತನ ವಿತರಣೆ, ಅಶಕ್ತ ಕುಟುಂಬಗಳಿಗೆ ನೆರವು ಹಸ್ತಾಂತರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಿತು.

ಸಂಘದ ಕಟ್ಟಡ ಸಮಿತಿಯ ನೂತನ ಗೌರವಾಧ್ಯಕ್ಷ ಪಿ.ಎನ್. ದಿನೇಶ ಆಚಾರ್ಯ, ಅಧ್ಯಕ್ಷ ರವಿಕಿರಣ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಸುಕನ್ಯಾ ಅಚಾರ್ಯ, ಯುವ ವೃಂದದ ಅಧ್ಯಕ್ಷ ದಯಾನಂದ ಅಚಾರ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಉಪೇಂದ್ರ ಆಚಾರ್ಯ ನಿರೂಪಿಸಿದರು. ರವೀಂದ್ರ ಆಚಾರ್ಯ ವಂದಿಸಿದರು.

















