ಲಂಡನ್: ಫೇಸ್ಬುಕ್ಗೆ ಬ್ರಿಟನ್ನ ಸ್ಪರ್ಧಾ ಆಯೋಗ ₹519.76 ಕೋಟಿ (5 ಕೋಟಿ ಪೌಂಡ್) ದಂಡ ವಿಧಿಸಿದೆ.
ಆ್ಯನಿಮೇಟೆಡ್ ಗ್ರಾಫಿಕ್ಸ್ ನವೋದ್ಯಮ ಜಿಫಿ (Giphy) ಖರೀದಿ ವಿಚಾರವಾಗಿ ಫೇಸ್ ಬುಕ್, ಮಾಹಿತಿ ನೀಡಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಜಿಫಿ ನವೋದ್ಯಮವನ್ನು ಕಳೆದ ವರ್ಷ ಫೇಸ್ಬುಕ್ ಖರೀದಿಸಿತ್ತು. ಮುಖ್ಯವಾದ ಮಾಹಿತಿಯನ್ನು ಒದಗಿಸಲು ನಿರಾಕರಿಸುವುದು ಆದೇಶದ ಉಲ್ಲಂಘನೆ ಎಂದು ಫೇಸ್ಬುಕ್ಗೆ ಎಚ್ಚರಿಕೆ ನೀಡಿದ್ದೆವು. ಈ ಕುರಿತು ಫೇಸ್ಬುಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಫೇಸ್ಬುಕ್ ಸಲ್ಲಿಸಿದ್ದ ಮನವಿಗೆ ಎರಡು ನ್ಯಾಯಾಲಯಗಳಲ್ಲಿ ಹಿನ್ನಡೆ ಉಂಟಾಗಿತ್ತು.
ಆದರೂ ಮಾಹಿತಿ ನೀಡಲು ಕಂಪನಿ ಹಿಂದೇಟು ಹಾಕಿತ್ತು ಎಂದು ಆಯೋಗದ ಹಿರಿಯ ನಿರ್ದೇಶಕ ಜೋಯಲ್ ಬ್ಯಾಮ್ಫೋರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾನು ಕಾನೂನಿಗಿಂತಲೂ ಮೇಲೆ ಎಂದು ಭಾವಿಸುವ ಯಾವುದೇ ಕಂಪನಿಗೆ ಇದು ಎಚ್ಚರಿಕೆಯ ಗಂಟೆಯಾಗಿರಲಿದೆ ಎಂದೂ ಪ್ರಕಟಣೆ ತಿಳಿಸಿದೆ.