ಉಡುಪಿ: ಕಳೆದ ಐದು ದಶಕಗಳಿಂದ ಉಡುಪಿ ನಗರದ ಜನತೆಗೆ ಉತ್ಕೃಷ್ಟ ಗುಣಮಟ್ಟದ ಬೇಕರಿ ತಿನಿಸುಗಳನ್ನು ಉಣಬಡಿಸುತ್ತಿರುವ “ರೋಯಲ್ ಬೇಕರಿ” 54ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.
ಗುಣಮಟ್ಟ ಹಾಗೂ ರುಚಿಯಲ್ಲಿ ರಾಜಿ ಮಾಡಿಕೊಳ್ಳದೆ, ಕಡಿಮೆ ದರದಲ್ಲಿ ವೆರೈಟಿ ಬೇಕರಿ ತಿನಿಸುಗಳನ್ನು ಗ್ರಾಹಕರಿಗೆ ಪೊರೈಸುವಲ್ಲಿ ರೋಯಲ್ ಬೇಕರಿ ಸೈ ಎನಿಸಿಕೊಂಡಿದೆ. ತನ್ನ ಸ್ವಾದಿಷ್ಟಕರ ತಿಂಡಿ ತಿನಿಸುಗಳ ಮೂಲಕ ಮನೆಮಾತಾಗಿದೆ.
ಕೂಷ್ಮಾಂಡ ಹಲ್ವಾ, ಕೋಕನಟ್ ಬರ್ಫಿಗೆ ಫೇಮಸ್:
ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ವಿಶ್ವೇಶ್ವರಯ್ಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ “ರೋಯಲ್ ಬೇಕರಿ”, ಕೂಷ್ಮಾಂಡ ಹಲ್ವಾ, ಕೋಕನಟ್ ಬರ್ಫಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಎಲ್ಲ ಬಗೆಯ ತಿಂಡಿ ತಿನಿಸುಗಳನ್ನು ಸ್ವತಃ ತಯಾರಿಸಿ ಮಾರಾಟ ಮಾಡಲಾಗುತ್ತದೆ. ವಿವಿಧ ರೀತಿಯ ಕಾಜು ಸಿಹಿ ತಿಂಡಿಗಳು, ವೆರೈಟಿ ಹಲ್ವಾ, ತರತರಹದ ಲಾಡು, ಖಾರ ತಿನಿಸುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಕರ್ಷಕ ಬಾಕ್ಸ್ ಗಳಲ್ಲಿ ಲಭ್ಯವಿದೆ.
ದೀಪಾವಳಿಗೆ ಸ್ಪೆಷಲ್ ಸ್ವೀಟ್ಸ್ ಬಾಕ್ಸ್ ಲಭ್ಯ:
ದೀಪಾವಳಿ ಹಬ್ಬಕ್ಕೆ ಬೇಕಾಗುವ ಎಲ್ಲ ತರದ ಸ್ಪೆಷಲ್ ಸ್ವೀಟ್ಸ್, ಸ್ವೀಟ್ ಬಾಕ್ಸ್, ಡ್ರೈ ಪ್ರೂಟ್ಸ್ ಬಾಕ್ಸ್, ಡ್ರೈ ಪ್ರೂಟ್ಸ್ ಹಾಗೂ ಬಗೆಬಗೆಯ ಸಿಹಿತಿಂಡಿಗಳು ಲಭ್ಯವಿದೆ. ಗ್ರಾಹಕರಿಗೆ ಎಲ್ಲ ತಿನಿಸುಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಾಗುದು ಎಂದು ಮಾಲೀಕರ ಪ್ರಕಟಣೆ ತಿಳಿಸಿದೆ.