ಉಡುಪಿ: ಹಠಾತ್ ಹೃದಯಾಘಾತ ಸಂಭವಿಸಿದ ಪರಿಣಾಮ ಬಸ್ಸಿನಲ್ಲೇ ಯುವಕನೋರ್ವ ಮೃತಪಟ್ಟ ಘಟನೆ ಘಟನೆ ಕುಂದಾಪುರ – ಶಿವಮೊಗ್ಗ ರಾಜ್ಯ ರಸ್ತೆಯ ಸಿದ್ದಾಪುರ ಗ್ರಾಮದ ಜನ್ಸಾಲೆ ಬಳಿ ನಡೆದಿದೆ.
ಗದಗ ಜಿಲ್ಲೆಯ ಈರಪ್ಪ ಎಂಬವರ ಮಗ ಚಂದ್ರು (24) ಮೃತದುರ್ದೈವಿ. ಇವರು ದಾವಣಗೆರೆಗೆ ಹೋಗಲು ದುರ್ಗಾಂಬ ಬಸ್‌ನಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಉಡುಪಿಯಲ್ಲಿ ಬಸ್ ಹತ್ತಿ ಪ್ರಯಾಣಿಸುತ್ತಿದ್ದ ಇವರು, ದಾರಿ ಮಧ್ಯೆ ತೀವ್ರವಾಗಿ ಅಸ್ವಸ್ಥಗೊಂಡರು.
ಕೂಡಲೇ ಚಾಲಕ ಬಸ್ಸನ್ನು ಸಿದ್ದಾಪುರ ಪೇಟೆಯಲ್ಲಿ ನಿಲ್ಲಿಸಿ ಅಸ್ವಸ್ಥಗೊಂಡ ಚಂದ್ರು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಚಂದ್ರು ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ












