Home » ಮಣಿಪಾಲ: ಬೈಕ್ ಗೆ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರನಿಗೆ ಗಾಯ
ಮಣಿಪಾಲ: ಬೈಕ್ ಗೆ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರನಿಗೆ ಗಾಯ
ಮಣಿಪಾಲ: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಅಲೆವೂರು ರಸ್ತೆಯ ಬಳಿ ಸಂಭವಿಸಿದೆ. ಈ ಬಗ್ಗೆ ಬೈಕ್ ಸವಾರ ಜೀವನ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರು ಚಾಲಕ ಅನಿರುದ್ದ ಎಂಬವರ ನಿರ್ಲಕ್ಷ್ಯ ಮತ್ತು ದುಡುಕುತನದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.