ಉಡುಪಿ: ಕಾಪು ಮಾರಿಗುಡಿಯ ದರ್ಶನಕ್ಕಾಗಿ ಉಡುಪಿಗೆ ಬಂದಿದ್ದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರು, ಉಡುಪಿಯ ಪ್ರಸಿದ್ಧ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದರು. ಕೆಲಹೊತ್ತು ಅಲ್ಲಿಂದ ತಂಗಿದ್ದ ಸೂರ್ಯ ಕುಮಾರ್ ಅವರೊಂದಿಗೆ ವಸತಿ ಸಮುಚ್ಚಯದ ನಿವಾಸಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ನಿಂತು ಪೋಟೊಗೆ ಪೋಸ್ ಕೊಟ್ಟರು. ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಜೊತೆ ಪೋಟೊ ತೆಗೆಸಿಕೊಂಡು ನಿವಾಸಿಗಳು ಸಂಭ್ರಮಿಸಿದರು.