ಬೆಳ್ತಂಗಡಿ: ಅನಾರೋಗ್ಯದಿಂದ ಯುವತಿ ಒಬ್ಬಳು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಶಿಶಿಲ ಗ್ರಾಮದ ಪೇರಿಕೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ಯುವತಿಯನ್ನು ಪೇರಿಕೆಯ ಕೃಷ್ಣಪ್ಪ ಮಲೆಕುಡಿಯ ಮತ್ತು ಸುನಂದಾ ದಂಪತಿಯ ಪುತ್ರಿ ಸುಪ್ರಿತಾ(16) ಎಂದು ಗುರುತಿಸಲಾಗಿದೆ.
ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಮಂಗಳವಾರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು ತಕ್ಷಣ ಅವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ದು ಔಷಧ ಕೊಡಿಸಿದ್ದರು. ಆದರೆ ಬಳಿಕ ಮನೆಗೆ ಹಿಂದಿರುಗವ ವೇಳೆ ಪ್ರಜ್ಞೆ ತಪ್ಪಿದ್ದರು. ಬಳಿಕ ವೈದ್ಯರ ಬಳಿಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ಸುಪ್ರೀತಾ ತಂದೆ, ತಾಯಿ, ತಮ್ಮನನ್ನು ಅಗಲಿದ್ದಾರೆ.












