ಉಡುಪಿ: ಜಿಲ್ಲಾ ಪೊಲೀಸ್ ಘಟಕದ 2022-23 ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿ.ಎ.ಆರ್/ ಡಿ.ಎ.ಆರ್) ಪುರುಷ ಮತ್ತು ತೃತೀಯ ಲಿಂಗ ಪುರುಷ -3064 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಜುಲೈ 10 ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಿಗಧಿಪಡಿಸಲಾಗಿದ್ದ ದೈಹಿಕ ಮತ್ತು ದೇಹದಾಢ್ಯತೆ ಪರೀಕ್ಷೆಯನ್ನು ಮಳೆ ಹಿನ್ನೆಲೆ, ಮುಂದೂಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.