ಕುಂದಾಪುರ: ಮುಂಬಯಿಯ ಸಂಸ್ಥೆಯೊಂದು ರೂ.16 ಲಕ್ಷ ಗೇರುಬೀಜ ಖರೀದಿಸಿ ಹಣ ನೀಡದೆ ವಂಚಿಸಿರುವ ಘಟನೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದಲ್ಲಿ ನಡೆಯಲಿದೆ. ಗುಲ್ವಾಡಿ ಗ್ರಾಮದ ಗುಲ್ವಾಡಿ ಟ್ರೇಡರ್ಸ್ ಹೆಸರಿನ ಗೇರುಬೀಜ ಸಂಸ್ಕರಣೆಯ ಘಟಕ ನಡೆಸಿಕೊಂಡಿರುವ ಅಸ್ಮಾ (33) ಅವರಿಗೆ ಮಹಾವೀರ ಟ್ರೇಡಿಂಗ್ ಕಂಪೆನಿ ಮುಂಬಯಿಯ ಮಾಲಕಿ ಭಾರತಿ, ಆಕೆಯ ಪತಿ ನೀಲೇಶ್ ನಿರಂಜನ್, ಅವರ ಬಂಧು ಪಿಯುಷ್ ಗೋಗ್ರಿ ಅವರು ವಂಚಿಸಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿದೆ. ನಿತೇಶ್ ಕೆ. ಟಕ್ಕರ್ ಎಂಬ ದಲ್ಲಾಳಿ ಮುಖಾಂತರ ಆರೋಪಿಗಳ ಪರಿಚಯವಾಗಿ 2 ವರ್ಷಗಳಿಂದ ಆರೋಪಿಗಳು ಗೇರುಬೀಜ ಖರೀದಿಸುವ ವ್ಯವಹಾರ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆರೋಪಿಗಳು ರೂ.16 ಲಕ್ಷ ಮೌಲ್ಯದ ಗೇರು ಬೀಜ ಖರೀದಿಸಿ 15 ದಿನಗಳಲ್ಲಿ ಹಣ ಪಾವತಿಸುವುದಾಗಿ ಹೇಳಿ ಮೋಸ ಮಾಡಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












