ಕಾಪು: ದೋಣಿಯಿಂದ ಹೊಳೆಗೆ ಬಿದ್ದು ಮೀನುಗಾರ ಮೃತ್ಯು.

ಕಾಪು: ಉದ್ಯಾವರ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಿಂದ ಹೊಳೆಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಉದ್ಯಾವರ ಪಿತ್ರೋಡಿ ನಿವಾಸಿ ಗೋವರ್ಧನ್‌ (62) ಎಂದು ಗುರುತಿಸಲಾಗಿದೆ. ತನಿಶ್ರೀ ಹೆಸರಿನ ಸಾಂಪ್ರದಾಯಿಕ ನಾಡದೋಣಿಯಲ್ಲಿ ಲೀಲಾಧರ ಅವರೊಂದಿಗೆ ಸೇರಿಕೊಂಡು ಬುಧವಾರ ಬೆಳಗ್ಗೆ ಪಾಪನಾಶಿನಿ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. ನದಿಯಲ್ಲಿ ಕಂತು-ಬಲೆಯನ್ನು ಹೊಳೆಯ ನೀರಿಗೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ರಭಸವಾದ ಗಾಳಿ, ಅಲೆಗಳ ಒತ್ತಡದಿಂದ […]

ಮಣಿಪಾಲ: ಮದ್ಯ ಮಾರಾಟ – ಇಬ್ಬರು ಪೊಲೀಸರ ವಶಕ್ಕೆ.

ಮಣಿಪಾಲ: ಮದ್ಯ ಮಾರಾಟ ಮಾಡುತ್ತಿದ್ದ ಅಬ್ದುಲ್‌ ರಜಾಕ್‌ (26), ಮುದುಕಪ್ಪ (39) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚುನಾವಣೆ ನಿಮಿತ್ತ ಮದ್ಯಮಾರಾಟ ನಿಷೇಧವಿದ್ದರೂ 80 ಬಡಗಬೆಟ್ಟುವಿನ ಅಪಾರ್ಟ್‌ಮೆಂಟ್‌ವೊಂದರ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಇವರಿಬ್ಬರು ಅಕ್ರಮವಾಗಿ ಮದ್ಯಮಾರಾಟ ಮಾಡಿಕೊಂಡಿದ್ದರು. ಅಬ್ದುಲ್‌ ರಜಾಕ್‌ನ ಬಳಿ ಇದ್ದ ಮದ್ಯ ತುಂಬಿದ 60 ಟೆಟ್ರಾ ಪ್ಯಾಕೆಟ್‌ ಹಾಗೂ ಮುದುಕಪ್ಪನ ಬಳಿ ಇದ್ದ 15 ಟೆಟ್ರಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀಟ್ ಯುಜಿ 2024: ಆಕಾಶ್ ಉಡುಪಿ ಶಾಖೆಯ 2 ವಿದ್ಯಾರ್ಥಿಗಳು ಟಾಪ್ ಸ್ಕೋರರ್

ಉಡುಪಿ, ಜೂನ್ 05: ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಉಡುಪಿ ಶಾಖೆಯ 2 ವಿದ್ಯಾರ್ಥಿಗಳು ಪ್ರತಿಷ್ಠಿತ NEET UG 2024 ಪರೀಕ್ಷೆಯಲ್ಲಿ 705 ಹಾಗೂ ಹೆಚ್ಚಿನ ಅಂಕಗಳನ್ನು ಗಳಿಸಿ, ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಗಮನಾರ್ಹ ಸಾಧನೆಯು ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು AESL ಒದಗಿಸಿದ ಉತ್ಕೃಷ್ಟ-ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಫಲಿತಾಂಶ ಪ್ರಕಟಿಸಿದೆ.ಪ್ರಜ್ಞಾನ್ ಪಿ. ಶೆಟ್ಟಿ 715 […]

ಉಡುಪಿ: ಶಾಲಾ ಬಸ್ ಚಾಲಕನಿಗೆ ಹೃದಯಾಘಾತ – ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ.

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ನಲ್ಲೇ ಚಾಲಕನಿಗೆ ಲಘು ಹೃದಯಾಘಾತವಾಗಿದ್ದು, ಆತನ ಸಮಯ ಪ್ರಜ್ಞೆಯಿಂದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಪೆರಂಪಳ್ಳಿಯಲ್ಲಿ ಇಂದು ಸಂಜೆ ನಡೆದಿದೆ. ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯ ಬಸ್ 65 ಮಕ್ಕಳನ್ನು ಹತ್ತಿಸಿಕೊಂಡು ಪೆರಂಪಳ್ಳಿಯಾಗಿ ಮಣಿಪಾಲದ ಕಡೆಗೆ ತೆರಳುತ್ತಿತ್ತು. ಪೆರಂಪಳ್ಳಿಗೆ ಬರುತ್ತಿದ್ದಂತೆ ಬಸ್‌ನ ಚಾಲಕ ಆಲ್ವಿನ್ ಡಿಸೋಜಾ (52) ಅವರಿಗೆ ಲಘು ಹೃದಯಾಘಾತವಾಗಿದೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಚಾಲಕ ಆಲ್ವಿನ್ ಅವರು ಬಸ್‌ನನ್ನು ಸಂಪೂರ್ಣ ಎಡಕ್ಕೆ ತಿರುಗಿಸಿ ನಿಲ್ಲಿಸಿದ್ದರು. ಇದರಿಂದ […]

ನೀಟ್‌ ಫಲಿತಾಂಶ ಪ್ರಕಟ, ಕ್ರಿಯೇಟಿವ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 05 ರಂದು ನಡೆಸಿದ ನೀಟ್‌ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.ವಿದ್ಯಾರ್ಥಿಗಳಾದ ಕಾರ್ತಿಕ್‌ ಕೆ.ಎಸ್‌ 99.8976127 ಪರ್ಸಂಟೇಜ್ ನೊಂದಿಗೆ 698 ಅಂಕಗಳನ್ನು ಗಳಿಸಿರುತ್ತಾರೆ. ನೇಹಾ ಕೆ ಉದಪುಡಿ 99.8815839 ಪರ್ಸಂಟೇಜ್ ನೊಂದಿಗೆ 696 ಅಂಕಗಳನ್ನು ಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ. ಇತರ ವಿದ್ಯಾರ್ಥಿಗಳಾದ ಆದಿತ್ಯ ಶೇಟ್‌ 687, ಆನ್ಯಾ ಡಿ.ಜೆ ಗೌಡ 683, ಪ್ರೇಮ್‌ ಸಾಗರ್‌ ಪಾಟೀಲ್‌ […]