ಕಾರ್ಕಳ: ಹರ್ಷಿತ್ ಆಚಾರ್ಯಗೆ ‘ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ.

ಕಾರ್ಕಳ: ಕ್ರೀಡೆಯಲ್ಲಿ(ಕರಾಟೆ ಮತ್ತು ಚದುರಂಗ) ಉತ್ತಮ ಸಾಧನೆಯನ್ನು ಗುರುತಿಸಿ ಕಾರ್ಕಳ ತಾಲೂಕಿನ ಬೈಲೂರು ಪ್ರೌಢಶಾಲೆಯ ವಿದ್ಯಾರ್ಥಿ 9 ನೇ ತರಗತಿಯ ಹರ್ಷಿತ್ ಆಚಾರ್ಯ ಅವರಿಗೆ ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ ಇವರು ಸೆ.8ರಂದು ಬೆಳಗಾವಿ ಜಿಲ್ಲೆಯ ಕನ್ನಡ ಭವನದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಹೆಮ್ಮೆಯ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.

ಹರ್ಷಿತ್ ಕರಾಟೆ ಮಾಸ್ಟರ್ ಗಳಾದ ಸೋಮನಾಥ ಡಿ. ಸುವರ್ಣ ಮತ್ತು ಡಾ.ವಿಜಯಲಕ್ಷ್ಮಿ ಆರ್ ನಾಯಕ್ ಅವರ ಶಿಷ್ಯರಾಗಿದ್ದು, ಬೈಲೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಸರ್ ಹಾಗೂ ಪಿ.ಟಿ ಟೀಚರ್ ಫೆಡ್ರಿಕ್ ರೇಬೆಲ್ಲೊ ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪ್ರತಿನಿಧಿಯಾಗಿ ಹಲವು ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರು ನೀರೆ ಗ್ರಾಮದ ಕೋಟಿಬೆಟ್ಟು ನಿವಾಸಿಗಳಾದ ಶ್ರೀಮತಿ ವಸಂತಿ ಮತ್ತು ಹರಿಶ್ಚಂದ್ರ ಆಚಾರ್ಯ ಇವರ ಪುತ್ರರಾಗಿದ್ದಾರೆ.