ಕಾಪು: ಕೋಳಿ‌ ಅಂಕಕ್ಕೆ ದಾಳಿ – ಏಳು ಮಂದಿ ವಶಕ್ಕೆ

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಅಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಕಾಪು ಮಲ್ಲಾರಿನ ಗರಡಿ ಪ್ರದೇಶಕ್ಕೆ ದಾಳಿ ಮಾಡಿದ ಕಾಪು ಪೊಲೀಸರು ಒಂಭತ್ತು ಕೋಳಿ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ಬಲೆಗೆ ಬಿದ್ದವರು ಕೈಪುಂಜಾಲು ನಿವಾಸಿಗಳಾದ ವಿಜಿಸ್ಟನ್(42), ಫೆಡ್ರಿಕ್ ಅನ್ಮಣ್ಣ(32), ಕಟ್ ಹೌಸ್ ಮಲ್ಲಾರು ನಿವಾಸಿ ಸಂದೇಶ್(37), ಬೆಳಪು ನಿವಾಸಿ ನಿತಿನ್(30), ಇನ್ನಂಜೆ ನಿವಾಸಿ ಅಭಿಷೇಕ್ (21), ಉಡುಪಿ ಕೊಡವೂರು ನಿವಾಸಿ ಸಚಿನ್ ಕೋಟ್ಯಾನ್ (26) ಹಾಗೂ ಮಲ್ಲಾರು ನಿವಾಸಿ ಉಮೇಶ್(50) ಎಂದು ತಿಳಿಯಲಾಗಿದೆ.

ಜೂಜು ನಡೆಸುವ ಉದ್ದೇಶದಿಂದ ಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಮಾಹಿತಿ ಪಡೆದ ಕಾಪು ಎಸ್ಸೈ ಅಬ್ದುಲ್ ಖಾದರ್ ದಾಳಿ ನಡೆಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.