ಎಲ್ಲೂರು: ಮಹತೋಭಾರ ಶ್ರೀ ವಿಶ್ವೇಶ್ವೆ ದೇವಸ್ಥಾನ, ಎಲ್ಲೂರು
ದಿನಾಂಕ: 31/01/2025 ರಂದು ಸಂಜೆ ಗಂಟೆ 6:00 ಕ್ಕೆ ಶ್ರೀ ದೇವಳದ ನಂದಿ ಶಿವೇಂದ್ರನ ನೂತನ ಹಟ್ಟಿಗೆ ಶ್ರೀ ದೇವಳದ ಸರದಿ ತಂತ್ರಿಗಳಾದ ಪಾದೂರು ಶ್ರೀ ಲಕ್ಷ್ಮೀ ನಾರಾಯಣ ತಂತ್ರಿಗಳವರ ನೇತೃತ್ವದಲ್ಲಿ ವಾಸ್ತು ಹೋಮ ಹಾಗೂ ಅಘೋರ ಹೋಮ ಮತ್ತು ಶ್ರೀ ದೇವಳ ನೂತನ ಕೆರೆಗೆ ತಟಕಾ ಶಾಂತಿ ಹೋಮವು ಜರಗಿತು.

ಈ ಸಂರ್ದಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು, ಶ್ರೀ ದೇವಳದ ಪವಿತ್ರಪಾಣಿಯವರು, ಗ್ರಾಮ ಸೀಮೆಯ ಸದಸ್ಯರು, ತಂತ್ರಿಗಳು, ಅರ್ಚಕರು ಹಾಗೂ ನೌಕರರು ಉಪಸ್ಥತರಿದ್ದರು.
ಈ ಸುಸಂದರ್ಭದಲ್ಲಿ ನೂತನ ಕರೆಯನ್ನು ಹಾಗೂ ಶ್ರೀ ದೇವಳದ ನಂದಿಯ ನೂತನ ಹಟ್ಟಿಯನ್ನು ನಿರ್ಮಿಸಿಕೊಟ್ಟ ಶ್ರೀ ಅನಿಲ್ ಶೆಟ್ಟಿ ಅಮರ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಇವರಿಗೆ ಶ್ರೀ ದೇವರು ಉತ್ತರೋತ್ತರ ಅಭಿವೃದ್ಧಿಯ, ಅಯುರ್-ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ತಥಿಸಿದರು.












