ಎಲ್ಲರಲ್ಲೂ ಕ್ಷಮೇ ಕೇಳುತ್ತಾ, ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್ ಫೋಗಟ್.

ನವದೆಹಲಿ: ಆ.8: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50ಕೆಜಿ ವಿಭಾಗದ ಕುಸ್ತಿಯ ಫೈನಲ್ನಲ್ಲಿ ಭಾರತದ ಚಿನ್ನದ ಕನಸು ಸಾಕಾರಗೊಳಿಸಲು ಮುನ್ನುಗ್ಗುತ್ತಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹ ಭಾರಿ ನಿರಾಸೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ 100 ಗ್ರಾಂ ತೂಕ ಹೆಚ್ಚಾದ ಕಾರಣ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರು.

ವಿದಾಯ ಘೋಷಿಣೆ:

ಭಾರತದ ಮನವಿ, ಪ್ರತಿಭಟನೆಗಳಿಂದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಬದಲಾಗಲಿಲ್ಲ. ಇತ್ತ ಅನರ್ಹದ ಬೆನ್ನಲ್ಲೇ ವಿನೇಶ್ ಫೋಗಟ್ ವಿದಾಯ ಘೋಷಿಸಿದ್ದಾರೆ. ವಿದಾಯ ಘೋಷಿಸುತ್ತಿದ್ದಂತೆ ವಿನೇಶ್ ಫೋಗಟ್ ಭಾವುಕರಾಗಿದ್ದಾರೆ. ಇದೇ ವೇಳೆ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.

ಟ್ವೀಟ್ ಮೂಲಕ ಮಾಹಿತಿ ಹಂಚಿದ ವಿನೇಶ್ ಫೋಗಟ್ ಅವರು, ನನ್ನ ವಿರುದ್ಧದ ಕುಸ್ತಿಯಲ್ಲಿ ಅಮ್ಮ ಗೆದ್ದಿದ್ದಾಳೆ. ಕ್ಷಮಿಸಿ ಅಮ್ಮಾ ನಾನು ಸೋತೆ. ನಿನ್ನ ಕನಸು, ನನ್ನ ಧೈರ್ಯ ಎಲ್ಲವೂ ನುಚ್ಚು ನೂರಾಗಿದೆ. ನನ್ನಲ್ಲಿನ್ನು ಹೋರಾಡುವ ಶಕ್ತಿ ಉಳಿದಿಲ್ಲ.

2001-2024 ಕುಸ್ತಿಗೆ ವಿದಾಯ. ಎಲ್ಲರಲ್ಲೂ ಕ್ಷಮೇ ಕೇಳುತ್ತಾ, ನಿಮ್ಮೆಲ್ಲರಿಗೆಗೂ ಸದಾ ನಾನು ಋಣಿಯಾಗಿರುತ್ತೇನೆ ಎಂದು ವಿನೇಶ್ ಫೋಗಟ್ ಅವರು ಟ್ವೀಟ್ ಮಾಡಿದ್ದಾರೆ.