ಉಡುಪಿಯ ಎನೋಕ್ ರೆನಾಲ್ಟ್ ಶೋರೂಮ್ನಲ್ಲಿ :ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV,ಹೊಸ ವಿನ್ಯಾಸದ ರೆನಾಲ್ಟ್ ಡಸ್ಟರ್ ಬಿಡುಗಡೆ ಸಮಾರಂಭ

ಉಡುಪಿ ಎನೋಕ್ ರೆನಾಲ್ಟ್ ಶೋ ರೂಮ್ನಲ್ಲಿ ದಿನಾಂಕ 11ರಂದು ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV,ಹೊಸ ವಿನ್ಯಾಸದ ರೆನಾಲ್ಟ್ ಡಸ್ಟರ್ ಕಾರು ಬಿಡುಗಡೆ ಸಮಾರಂಭ ನಡೆಯಿತು .ಈ ಸಮಾರಂಭದಲ್ಲಿ ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಬಡಗುಬೆಟ್ಟು ಸೊಸೈಟಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಮಣಿಪಾಲ ಇನ್ಸ್ಟಿಟ್ಯೂಟ್ ನ ಅಸೋಸಿಯೇಟ್ ಪ್ರೊಫೆಸರ್ ಹೂಬನ ಥಾಮಸ್ ,ಎನೋಕ್ ರೆನಾಲ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅರುಣ್ ಮೆಂಡಿಸ್ ಹಾಗು ಮಿಥುನ್ ಚೌಟರ್ ಮತ್ತು ಜನರಲ್ ಮ್ಯಾನೇಜರ್ ಮೊಹಮ್ಮದ್ ರಿಜ್ವಾನ್ ಉಪಸ್ಥಿತರಿದ್ದರು .

ಹೊಸ ವಿನ್ಯಾಸ, ಅದೇ ಕದರ್‌ನೊಂದಿಗೆ , ಒಂದು ಕಾಲದ ಭಾರತದ ಅಚ್ಚುಮೆಚ್ಚಿನ SUV ರೆನಾಲ್ಟ್‌ ಡಸ್ಟರ್

ರೆನಾಲ್ಟ್ ಡಸ್ಟರ್ ಹೊಸ ರೂಪದಲ್ಲಿ ಭಾರತಕ್ಕೆ ವಾಪಸ್ಸು ಬಂದಿದೆ. ಹೊಸ ವಿನ್ಯಾಸ, ಪವರ್‌ಫುಲ್ ಎಂಜಿನ್ ಮತ್ತು ಆಧುನಿಕ ಫೀಚರ್‌ಗಳೊಂದಿಗೆ ಡಸ್ಟರ್ ಮತ್ತೆ ಗ್ರಾಹಕರ ಮನ ಗೆಲ್ಲಲು ಸಜ್ಜಾಗಿದೆ.ಭಾರತದ SUV ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಕ್ರಾಂತಿಯನ್ನು ಉಂಟುಮಾಡಿದ್ದ ರೆನಾಲ್ಟ್ ಡಸ್ಟರ್ ಮತ್ತೆ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ. 2012ರಲ್ಲಿ ಭಾರತದಲ್ಲಿ ಆರಂಭವಾದ ಈ ಐಕಾನಿಕ ಮಾಡೆಲ್, ಕಾಂಪ್ಯಾಕ್ಟ್ SUV ವರ್ಗದಲ್ಲಿ ಹೊಸ ಚಾಪನ್ನು ಮೂಡಿಸಿತ್ತು. ಈಗ, 2026ರ ಜನವರಿ 26ರಂದು ಗಣತಂತ್ರ ದಿನದಂದು, ಹೊಸ ಜನರೇಷನ್ ರೆನಾಲ್ಟ್ ಡಸ್ಟರ್ ಅನ್ನು ಭಾರತದಲ್ಲಿ ಪ್ರಸ್ತುತಪಡಿಸುತ್ತಿದೆ ಎಂದು ರೆನಾಲ್ಟ್ ಕಂಪನಿ ಅಧಿಕೃತವಾಗಿ ಘೋಷಿಸಿದೆ. ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಡಸ್ಟರ್ ಹೊಸ ರೂಪದಲ್ಲಿ ಬರುತ್ತಿರುವುದು ಕಾರು ಪ್ರೇಮಿಗಳಲ್ಲಿ ಬಾರೀ ನಿರೀಕ್ಷೆ ಹುಟ್ಟು ಹಾಕಿದೆ.

ಡಸ್ಟರ್‌ನ ಇತಿಹಾಸ ಮತ್ತು ಜನಪ್ರಿಯತೆ
ರೆನಾಲ್ಟ್ ಡಸ್ಟರ್ ಭಾರತದಲ್ಲಿ ಬಂದಿದ್ದು 2012ರಲ್ಲಿ, ಮತ್ತು ಅದು ತಕ್ಷಣವೇ ಜನಪ್ರಿಯಗೊಂಡಿತು. ಅದರ ಗಟ್ಟಿಯಾದ ಬಿಲ್ಡ್ ಕ್ವಾಲಿಟಿ, ಉತ್ತಮ ಆಫ್-ರೋಡ್ ಸಾಮರ್ಥ್ಯ ಮತ್ತು ಕೈಗೆಟುಕುವ ಬೆಲೆಯು ಅದನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ಉತ್ತಮ ಆಯ್ಕೆಯಾಗಿತ್ತು. ಲಕ್ಷಾಂತರ ಯೂನಿಟ್‌ಗಳು ಮಾರಾಟವಾಗಿ, ಇದು‌ ಟಾಟಾ, ಹ್ಯುಂಡೈ ಮತ್ತು ಮಹಿಂದ್ರ ನಂತಹ SUV ಮಾಡೆಲ್ ಸ್ಪರ್ಧಿಗಳಿಗೆ ಸವಾಲು ಮೂಡಿಸುತ್ತಿತ್ತು. ಆದರೆ ಕೆಲವು ವರ್ಷಗಳ ನಂತರ, ಮಾರುಕಟ್ಟೆಯ ಬದಲಾವಣೆಗಳಿಂದಾಗಿ ಇದು ಭಾರತದಿಂದ ಹೊರಹೊಮ್ಮಿತು. ಈಗ, ಹೊಸ ಆವೃತ್ತಿಯೊಂದಿಗೆ ಅದರ ಮರಳುವಿಕೆ SUV ಪ್ರೇಮಿಗಳಿಗೆ ಖುಷಿಯ ಸುದ್ದಿಯಾಗಿದೆ.

ಹೊಸ ಡಸ್ಟರ್‌ನ ವೈಶಿಷ್ಟ್ಯಗಳು: ಆಧುನಿಕತೆ ಮತ್ತು ಶಕ್ತಿ
ಹೊಸ ಜನರೇಷನ್ ಡಸ್ಟರ್ CMF-B ಪ್ಲಾಟ್‌ಫಾರ್ಮ್ ಮೇಲೆ ನಿರ್ಮಿತವಾಗಿದ್ದು, ಇದು ಹೆಚ್ಚಿನ ಸುರಕ್ಷತೆ, ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. ಕಂಪನಿಯ ಟೀಸರ್ ವೀಡಿಯೋಗಳ ಪ್ರಕಾರ, ಇದರ ವಿನ್ಯಾಸ ಹೆಚ್ಚು ಪವರ್‌ ಫುಲ್ ಮತ್ತು ಹೆಚ್ಚು ಆಧುನಿಕತೆಯನ್ನು ಹೊಂದಿದೆ, ಟರ್ಬೊ-ಪೆಟ್ರೋಲ್ ಇಂಜಿನ್‌ಗಳೊಂದಿಗೆ ಸಜ್ಜುಗೊಂಡಿರುತ್ತದೆ.

ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ನಂತಹ ಸುರಕ್ಷತಾ ವೈಶಿಷ್ಟ್ಯಗಳು, ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮನಮೋಹಕ ಇಂಟೀರಿಯರ್ ಈ ಕಾರನ್ನು ಇನ್ನೂ ಹೆಚ್ಚು ಆಕರ್ಷಕವನ್ನಾಗಿ ಮಾಡುತ್ತವೆ. ಇಂಧನ ದಕ್ಷತೆ ಮತ್ತು ಪರಿಸರ ಸೌಹಾರ್ದ್ಯದ(Eco Friendly) ಮೇಲೆ ಒತ್ತು ನೀಡಲಾಗಿದ್ದು, ಇದು ಭಾರತದ ರಸ್ತೆಗಳ ಸವಾಲುಗಳಿಗೆ ಸರಿಹೊಂದುತ್ತದೆ.