ಹೊಸ ಆಡಳಿತ ಹೊಸ ಹುರುಪು: ಶ್ರೀ ರಾಮಾಶ್ರಮ ಪದವಿ ಪೂರ್ವ ಕಾಲೇಜಿಗೆ ತ್ರಿಶಾ ಸಂಸ್ಥೆಯ ಸಾಥ್

ಮಂಗಳೂರು ಕೊಂಚಾಡಿಯಲ್ಲಿರುವ ನೂರ ಏಳು ವರ್ಷದ ಇತಿಹಾಸವಿರುವ ರಾಮಾಶ್ರಮ ಟ್ರಸ್ಟ್ ನಡೆಸುತ್ತಿದ್ದ ಶ್ರೀ ರಾಮಾಶ್ರಮ ಪಿಯು ಕಾಲೇಜು, ವಾಣಿಜ್ಯ ಕ್ಷೇತ್ರದಲ್ಲಿ ವೃತ್ತಿಪರ ಶಿಕ್ಷಣದ ತರಬೇತಿ ನೀಡುತ್ತಿರುವ ತ್ರಿಶಾ ಸಂಸ್ಥೆಯ ನೂತನ ಆಡಳಿತದೊಂದಿಗೆ ಪದವಿಪೂರ್ವ ಕಾಲೇಜನ್ನು ನಡೆಸುತ್ತಿದ್ದು ಶಿಕ್ಷಣ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ನೂರ ಏಳು ವರ್ಷಗಳ ಅನುಭವವಿರುವ ರಾಮಾಶ್ರಮ ಟ್ರಸ್ಟ್ ನ ಸೇವೆಯ ಜೊತೆಗೆ ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ತ್ರಿಶಾ ಸಂಸ್ಥೆಯ ಒಡಂಬಡಿಕೆ ಕಾಲೇಜಿಗೆ ಹೊಸ ಹುರುಪನ್ನು ತಂದಿದೆ.
ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಬಿ.ಎ ಮತ್ತು ಎಸ್.ಇ.ಬಿ.ಎ ವಿಭಾಗದ ಜೊತೆಗೆ ವೃತ್ತಿಪರ ಕೋರ್ಸ್ ಗಳಾದ ಸಿ.ಎ ಮತ್ತು ಸಿ.ಎಸ್ ತರಬೇತಿಯನ್ನು ಹಾಗೂ ವಿಶೇಷವಾಗಿ ಐ.ಪಿ.ಎಂ. ಎ.ಟಿ (IPMAT) ಮತ್ತು ಸಿ.ಎಲ್.ಎ.ಟಿ (CLAT) ತರಬೇತಿಯನ್ನು ನೀಡುತ್ತಿದೆ.
ಸತತ ಇಪ್ಪತೈದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್ ನಂತಹ ವೃತ್ತಿಪರ ಕೋರ್ಸ್ ಗಳ ತರಬೇತಿಯನ್ನು ನೀಡುತ್ತಿರುವ ತ್ರಿಶಾ ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಉಡುಪಿ, ಮಂಗಳೂರು, ಬೆಂಗಳೂರಿನಲ್ಲಿ ತನ್ನ ಅಂಗ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ.

ವರ್ಷಕ್ಕೆ ೧ ರೂಪಾಯಿಯಲ್ಲಿ ಪಿ ಯು ವ್ಯಾಸಂಗ ಮಾಡುವ ಸದಾವಕಾಶ:
ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ಹಣದ ಕೊರತೆಯಿಂದಾಗಿ ತಮ್ಮ ನೆಚ್ಚಿನ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸುವುದರಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ತ್ರಿಶಾ ಸಂಸ್ಥೆಯು ಈ ಅದ್ಭುತ ಅವಕಾಶವನ್ನು ಒದಗಿಸುವಲ್ಲಿ ಒಂದು ಹೊಸ ಹೆಜ್ಜೆಯನ್ನು ಇರಿಸಿದೆ. ಇದರ ಅನುಸಾರ ಪ್ರತೀ ವರ್ಷದಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸುತ್ತಿದ್ದು, ಈ ಬಾರಿ ವಿನೂತನವಾಗಿ ಒಂದು ರೂಪಾಯಿಯ ವೆಚ್ಚದಲ್ಲಿ ಪಿ ಯು ಸಿ ಅಧ್ಯಯನ ಮಾಡುವ ಸುವರ್ಣಾವಕಾಶ ಒದಗಿಸಿದೆ.
ಎಸ್.ಎಸ್. ಎಲ್. ಸಿ. ಯಲ್ಲಿ 615 ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಿಗೆ ಒಂದು ರೂಪಾಯಿಯ ವೆಚ್ಚದಲ್ಲಿ ಪಿ ಯು ಸಿ ಅಧ್ಯಯನ ಮಾಡುವ ಅವಕಾಶವಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಕನಸನ್ನು ಸಾಕಾರಗೊಳಿಸಲು ಉಪಯೋಗವಾಗಲಿದೆ.
ಅದಲ್ಲದೆ ಎಸ್.ಎಸ್.ಎಲ್.ಸಿ.ಯಲ್ಲಿ 560 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ವಿದ್ಯಾರ್ಥಿ ವೇತನ ನೀಡುತ್ತಿದೆ. ಜೊತೆಗೆ ಕ್ರೀಡೆ ಮತ್ತು ಸಾಂಸ್ಕ್ರತಿಕ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಲಭ್ಯವಿದೆ.

ತ್ರಿಶಾ ಸಂಸ್ಥೆಯ ಅದ್ಭುತ ಫಲಿತಾಂಶ :
ಸಿ.ಎ ಇಂಟರ್ಮೆಡಿಯೇಟ್ ಹಾಗೂ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ಬಂದಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಕಳೆದ ಬಾರಿ ಸಿ.ಎ ಇಂಟರ್ಮೆಡಿಯೇಟ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ಫಲಿತಾಂಶ 55.7% ಹಾಗೂ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ 62.30 % ಆಗಿರುವದು ಹೆಮ್ಮೆಯ ವಿಷಯವಾಗಿದೆ.

ಪ್ರಥಮ ಪಿಯುಸಿ ಓದುತ್ತಿರುವಾಗಲೇ ಸಿ.ಎ ಕೋಚಿಂಗ್ ಪಡೆಯುವ ಅವಕಾಶ ಸಿಕ್ಕಿತು. ಇದರಿಂದ ನಾನು ದ್ವಿತೀಯ ಪಿಯುಸಿ ಮುಗಿಸಿದ ಕೂಡಲೇ ಸಿ.ಎ ಫೌಂಡೇಶನ್ ಬರೆಯಬಹುದು ಹಾಗೆ ನನ್ನ ಸಿ.ಎ ಆಗುವ ಕನಸನ್ನು ಬೇಗ ಸಾಕಾರಗೊಳಿಸುತ್ತಿದ್ದೇನೆ. ಪಿಯು ಹಾಗೂ ಸಿ.ಎ ವಿದ್ಯಾಭ್ಯಾಸವನ್ನು ಸಮಾನವಾಗಿ ಮಾಡುವಂತ ಕ್ಲಾಸ್ ವ್ಯವಸ್ಥೆ ಇನ್ನಷ್ಟು ಉಪಯೋಗವಾಗಿದೆ. ಹಾಗೂ ಸಿ.ಎ ವಿದ್ಯಾಭ್ಯಾಸವು ದ್ವಿತೀಯ ಪಿಯುಸಿ ಬೋರ್ಡ್ ಎಕ್ಸಾಮ್ ತಯಾರಿಗೂ ಸಹಾಯಕವಾಗಿದೆ.”

ಎಸ್.ಕೆ ಮೋಕ್ಷಿತ್ ಶ್ರೇಷ್ಠಿ, ದ್ವಿತೀಯ ಪಿಯುಸಿ (ಕಾಮರ್ಸ್ ), ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿ

ವಿದ್ಯಾರ್ಥಿ ನಿಲಯ (ಹಾಸ್ಟೆಲ್) ವಾಹನದ ಸೌಲಭ್ಯ :
ಕಾಲೇಜಿನಲ್ಲಿ ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕ ವಸತಿ (ಹಾಸ್ಟೆಲ್) ಸೌಲಭ್ಯವನ್ನು ಹೊಂದಿದೆ. ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ , ಶುದ್ದ ಹಾಗೂ ಅಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಸೌಲಭ್ಯಯುತ ಕೊಠಡಿಗಳು ಹಾಗೂ ಅಭ್ಯಾಸ ನಡೆಸಲು ಪ್ರತ್ಯೇಕ ಸ್ಥಳದ ವ್ಯವಸ್ಥೆಯಿದೆ. ಕೇವಲ ಶೈಕ್ಷಣಿಕ ವಿಚಾರಗಳು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ನಿಯಮಿತವಾದ ಆಟೋಟಗಳ ವ್ಯವಸ್ಥೆ ಹಾಗೂ ವಾರಾಂತ್ಯಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ಕೌಶಲ್ಯಾಭಿವೃದ್ಧಿ, ಜೀವನ ಕಲೆ ಮುಂತಾದ ವಿಷಯಗಳ ಮೇಲೆ ವಿಶೇಷ ಕಾರ್ಯಗಾರಗಳನ್ನು ನಡೆಸಲಾಗುವುದು.
ಜೊತೆಗೆ ವಿದ್ಯಾರ್ಥಿಗಳಿಗೆ ಸುರಕ್ಷಿತವಾದ ವಾಹನದ ಸೌಲಭ್ಯವು ಲಭ್ಯವಿದೆ.
ಸಂಸ್ಥೆಯು ಕಟಪಾಡಿಯಲ್ಲಿ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ನಡೆಸುತ್ತಿದ್ದು ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂ.ಸಿಎಸ್ ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿದ್ದು ಜೊತೆಗೆ ಜೆ.ಈ.ಈ, ನೀಟ್, ಸಿ.ಈ.ಟಿ ತರಬೇತಿಯನ್ನು ಭಾರತದ ಪ್ರತಿಷ್ಠಿತ ವಿಜ್ಞಾನ ಶಿಕ್ಷಣ ಸಂಸ್ಥೆಯಾದ ವೇದಾಂತು ದೀಕ್ಷಾ ಸಹಯೋಗದೊಂದಿಗೆ ನೀಡುತ್ತಿದೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಬಿ.ಎ ಮತ್ತು ಎಸ್.ಇ.ಬಿ.ಎ ಮತ್ತು ಸಿಎಸ್.ಇ.ಬಿ. ವಿಭಾಗದ ಜೊತೆಗೆ ಸಿ.ಎ ಮತ್ತು ಸಿ.ಎಸ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿ ವತಿಯಿಂದ ನೀಡುತ್ತಿದೆ.
ಕೇವಲ ಪಠ್ಯದ ವಿಷಯಗಳು ಮಾತ್ರ ಅಲ್ಲದೆ ಕ್ರೀಡೆ ಮತ್ತು ಇನ್ನಿತರ ಪಠ್ಯೇತರ ವಿಚಾರಗಳಿಗೂ ಪ್ರಾಮುಖ್ಯತೆ ನೀಡುತ್ತಿದ್ದು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಸಂಸ್ಥೆಯು ಕಾರ್ಯನಿರ್ವಹಿವುದು ಸಂಸ್ಥೆಯ ಉದ್ದೇಶವಾಗಿದ್ದು ಪ್ರಸ್ತುತ ಶೈಕ್ಷಣಿಕ ಸಾಲಿನ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದೆ. ಆಸಕ್ತರು ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.