ಕಾಸರಗೋಡು: ಬೈಕ್’ಗಳ ನಡುವೆ ಅಪಘಾತ – ಓರ್ವ ಮೃತ್ಯು, ಮೂವರಿಗೆ ಗಾಯ

ಕಾಸರಗೋಡು: ಮಂಗಳವಾರ ರಾತ್ರಿ ಚಟ್ಟಂಚಾಲ್ ನಲ್ಲಿ ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತ ಪಟ್ಟು, ಮೂವರು ಗಾಯಗೊಂಡ ಘಟನೆ ನಡೆದಿದೆ. ತೆಕ್ಕಿಲ್ ಬೆಂಡಿಚ್ಚಾಲ್ ನ ಮುಹಮ್ಮದ್ ತಸ್ಲೀಮ್ (20) ಮೃತಪಟ್ಟ ವಿದ್ಯಾರ್ಥಿ. ಚಟ್ಟಂಚಾಲ್ ಸಬ್ ಟ್ರೆಜರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ತಸ್ಲೀಮ್ ಮಂಗಳೂರಿನ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ ಶೆಟ್ಟಿ ನಿಧನ

ಉಡುಪಿಯ ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿಯವರು ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನ ಹೊಂದಿದರು. ಶ್ರೀಯುತರು ಊರಿನ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು ಹಾಗೂ ಚೇರ್ಕಾಡಿ ದೊಡ್ಡಮನೆ ಸಂಪ್ರದಾಯಬದ್ದ ಕಂಬಳ ಆಯೋಜನೆಯ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅಪಾರ ಸಂಖ್ಯೆಯ ಕುಟುಂಬಸ್ಥರು, ಧರ್ಮಪತ್ನಿ, ಮಗಳು ಹಾಗೂ ಅಳಿಯರನ್ನು ಅಗಲಿರುತ್ತಾರೆ.ಉಡುಪಿಯ ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿಯವರು ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನ ಹೊಂದಿದರು

ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್(MSDC) ಓರಣೆ ಇಂಟರ್ ನ್ಯಾಷನಲ್’ನಲ್ಲಿ ಮೇಕಪ್ ಕುರಿತು ವಿವಿಧ ಕೋರ್ಸ್’ಗಳು ಲಭ್ಯ.

ಮಣಿಪಾಲ: ಮಣಿಪಾಲ ಟಿಎಂಎ ಪೈ ಫೌಂಡೇಶನ್ ನ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್(MSDC) ಓರಣೆ ಇಂಟರ್ ನ್ಯಾಷನಲ್’ ಈಶ್ವರನಗರದಲ್ಲಿ ಮೇಕಪ್ ಕ್ಷೇತ್ರದಲ್ಲಿ ಪರಿಣಿತರಾಗಲು ಒಂದು ಉತ್ತಮ ಅವಕಾಶ ಕಲ್ಪಿಸಿದೆ. ಓರಣೆ ಇಂಟರ್ ನ್ಯಾಷನಲ್ ಸುಮಾರು 13 ವಿಭಾಗಗಳಲ್ಲಿ ಮೇಕಪ್ ಕುರಿತ ವಿವಿಧ ಕೋರ್ಸ್ ಗಳನ್ನು ರಚಿಸಿದ್ದು ಅತ್ಯುತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿದೆ. 🔹 Masters In Cosmetology 🔹Post Graduate Diploma In Cosmetology 🔹Advance Diploma In Aesthetics And Hair Designing […]

ಉಡುಪಿ: ಬಸ್ಸುಗಳು ನಿಗಧಿತ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಉಡುಪಿ, ಮೇ 15: ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಬರುವ ಕೆಲವೊಂದು ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು–ರಾ.ಹೆ.17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು ರಾ.ಹೆ.66 ಕರಾವಳಿ ಬೈಪಾಸಿನಿಂದ ಅಂಬಲಪಾಡಿ ಬೈಪಾಸ್- ಬ್ರಹ್ಮಗಿರಿ-ಅಜ್ಜರಕಾಡು-ತಾಲೂಕು ಕಛೇರಿ ಮೂಲಕ ಹಾಗೂ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು ತಾಂಗದಗಡಿ-ಗುಂಡಿಬೈಲು ಮೂಲಕ ಕಲ್ಸಂಕ ಬಂದು ಬೃಂದಾವನ ಹೋಟೆಲ್ ಬಳಿ ಎಡಕ್ಕೆ ತಿರುಗಿ ಕಾಫಿಯ ಹೋಟೆಲ್ ಬಳಿ ಬಲಕ್ಕೆ ತಿರುಗಿ ಸಿಟಿ ಬಸ್ಸು ನಿಲ್ದಾಣಕ್ಕೆ ತಲುಪುವಂತೆ ಹಾಗೂ ಬಾರ್ಕೂರು-ಬ್ರಹ್ಮಾವರ-ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಹಾಗೂ ಇತರೆ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು […]

ಉಡುಪಿ: ಸಿಡಿಲು ಬಡಿದು ಯುವಕ ಮೃತ್ಯು.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಸುರೇಶ್ ಶೆಟ್ಟಿ(38) ಮೃತಪಟ್ಟವರು ಎಂದು ಹೇಳಲಾಗಿದೆ. ಸಂಜೆ ಮಳೆ ಬರುತ್ತಿದ್ದಾಗ ಮನೆ ಬಳಿ ನಿಂತಿದ್ದ ಸುರೇಶ್ ಶೆಟ್ಟಿ ಸಿಡಿಲು ಬಡಿದು ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.