ಹಿರಿಯಡ್ಕ: ಕಾರು ಡಿಕ್ಕಿ; ಬೈಕ್ ಸವಾರನಿಗೆ ಗಾಯ

ಹಿರಿಯಡ್ಕ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಆತ್ರಾಡಿ ಸಮೀಪದ ಸ್ವಾಗತ ಗೋಪುರ ಬಳಿ ಶನಿವಾರ ನಡೆದಿದೆ.

ಉಡುಪಿ ಕಡೆಯಿಂದ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಮಂದಾರ್ತಿ ಮೂಲದ ಮಹಾಬಲ (60) ಎಂಬವರ ತಲೆ ಕುತ್ತಿಗೆ ಮತ್ತು ಕಾಲಿನ ಭಾಗಗಳಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.