ಹಿರಿಯಡಕ: ಜ.26 ರಂದು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ 32ನೇ ವಾರ್ಷಿಕೋತ್ಸವ ಸಮಾರಂಭ

ಹಿರಿಯಡಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ 32ನೇ ವಾರ್ಷಿಕೋತ್ಸವ ಸಮಾರಂಭ ಜ.26 ಶುಕ್ರವಾರ ಸಂಜೆ ಘಂಟೆ 6.30ರಿಂದ ಕೋಟ್ನಕಟ್ಟೆ ಗಾಂಧಿ ಮೈದಾನದಲ್ಲಿ ಜರಗಲಿರುವುದು.

ಜ.26-01-2024ನೇ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ.

ಸಂಜೆ ಘಂಟೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯವೈವಿಧ್ಯ – ಸ್ಥಳೀಯ ಪ್ರತಿಭೆಗಳಿಂದ.

ರಾತ್ರಿ ಘಂಟೆ 7.30ರಿಂದ: ಸಭಾ ಕಾರ್ಯಕ್ರಮಗಳು ನಡೆಯಲಿವೆ.

ಅಧ್ಯಕ್ಷತೆ: ಶ್ರೀಮತಿ ನಳಿನಾದೇವಿ ಎಂ. ಆರ್., ಕನ್ನಡ ಉಪನ್ಯಾಸಕರು ಸರಕಾರಿ ಪದವಿಪೂರ್ವ ಕಾಲೇಜು, ಹಿರಿಯಡಕ

ಮುಖ್ಯ ಅತಿಥಿ: ಡಾ. ಜ್ಞಾನೇಶ್ವರ ನಾಯಕ್, ಆಯುರ್ವೇದ ವೈದ್ಯರು, ಪತಂಜಲಿ ಚಿಕಿತ್ಸಾಲಯ ಬಿಜೈ, ಮಂಗಳೂರು ಹಾಗೂ ರಾಜ್ಯ ಉಪಾಧ್ಯಕ್ಷರು, ಪತಂಜಲಿ ಯೋಗ ಸಮಿತಿ, ಹರಿದ್ವಾರ್.

ಗೌರವ ಅಭಿನಂದನೆ: ಡಾ. ದೇವದಾಸ ಕಾಮತ್ ದಂಪತಿಯವರಿಗೆ, ಕಾಮತ್ ಡೇಕೇರ್ ಸೆಂಟರ್, ಹಿರಿಯಡಕ.

ಸಭಾಕಾರ್ಯಕ್ರಮದ ಬಳಿಕ ಚೈತನ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ “ಪಿರ ಪೋಂಡುಗೆ”

ಸರ್ವರಿಗೂ ಆದರದ ಸ್ವಾಗತ ಬಯಸುವ

ಶ್ರೀ ಸತ್ಯಪ್ರಸಾದ್, ಅಧ್ಯಕ್ಷರು

ಶ್ರೀ ದಿವಾಕರ ಭಂಡಾರಿ, ಕಾರ್ಯದರ್ಶಿ

ಹಾಗೂ ಸರ್ವ ಸದಸ್ಯರು, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ರಿ) ಪ್ರಕಟಣೆ ತಿಳಿಸಿದೆ.