ಶ್ರೀ ರಾಮಾಂಜನೇಯ ದೇವಸ್ಥಾನ ಕಲ್ಯಾಣಪುರ: ವಸಂತಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ಶತಕಲಶಾಭಿಷೇಕ.

ಉಡುಪಿ: ಶ್ರೀ ರಾಮಾಂಜನೇಯ ದೇವಸ್ಥಾನ ಕಲ್ಯಾಣಪುರ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಮೇ 27, 28 ಎರಡು ದಿನಗಳ ಕಾಲ ಜರಗಿತು. ಶ್ರೀ ದೇವರ ಸನ್ನಿಧಿಯಲ್ಲಿ ಸೋಮವಾರ ಸಂಜೆ ವಸಂತಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಭಾಜನಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಿತು.


ಪ್ರತಿಷ್ಠಾ ವರ್ಧಂತಿ ಅಂಗವಾಗಿ ಮಂಗಳವಾರ ಶ್ರೀ ದೇವರಿಗೆ ಪಂಚಾಮೃತಾ ಅಭಿಷೇಕ, ಶತ ಕಲಶಾಭಿಷೇಕ, ಸಾನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ ಪೂಜೆ, ಮಹಾ ಪೂಜೆಯ ಬಳಿಕ ಸಮಾರಾಧನೆ, ಪ್ರಸಾದ ವಿತರಣೆ ನಡೆಯಿತು.


ವೇದಮೂರ್ತಿ ಕಾಶೀನಾಥ್ ಭಟ್ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ರಾಮಚಂದ್ರ ಅವಧಾನಿ, ಗಣೇಶ ಭಟ್, ಜಯದೇವ ಭಟ್, ಪವನ್ ಭಟ್, ಜಯದೇವ ಪುರಾಣಿಕ್, ಮಹೇಶ್ ಭಟ್ ನಡೆಸಿಕೊಟ್ಟರು.
ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಳದ ಜೀರ್ಣೋದ್ಧಾರಕ್ಕೆ ಕಾರ್ಯಕ್ಕೆ 6 ಲಕ್ಷ ರೂ ದೇಣಿಗೆಯನ್ನು ದೇವಳದ ಆಡಳಿತ ಮೊಕ್ತೇಸರ್ ಅನಂತ ಪದ್ಮನಾಭ ಕಿಣಿಯವರಿಗೆ ನೀಡಲಾಯಿತು. ನೂರಾರು ಭಕ್ತರೂ ಉಪಸ್ಥರಿದ್ದರು.