ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ, ಕಾಲಭೈರವ ಸ್ವಾಮಿ ದೇವಸ್ಥಾನ: ನಾಳೆ (ಫೆ.26) ಸಹಸ್ರ ಬಿಲ್ವಾರ್ಚನೆ, ಜಾಗರಣೆ ಕಾರ್ಯಕ್ರಮ

ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಹಾಗೂ ಕಾಲಭೈರವ ಸ್ವಾಮಿ ದೇವಸ್ಥಾನದಲ್ಲಿ ಸಾಯಿ ಈಶ್ವರ್ ಗುರೂಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನಾಳೆ (ಫೆ.26) ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 6.30ಕ್ಕೆ ಶ್ರೀ ಸಾಯಿನಾಥ ದೇವರಿಗೆ ಅಭಿಷೇಕ, 7:30 ಕ್ಕೆ ಕಾಲಭೈರವ ಸ್ವಾಮಿಗೆ ಸಿಯಾಳ ಅಭಿಷೇಕ, 8ಕ್ಕೆ ಅಲಂಕಾರ ಪೂಜೆ, 9.30ಕ್ಕೆ ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನ ಆರತಿ ಹಾಗೂ 1 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ.

ಸಂಜೆ 4:30ಕ್ಕೆ ಪ್ರಗತಿ ನಗರ ಭದ್ರಕಾಳಿ ಭಜನಾ ಮಂಡಳಿಯಿಂದ ಭಜನೆ, 6.30ಕ್ಕೆ ಸಂಜೆಯ ಆರತಿ, ಸಂಜೆ 06:45ಕ್ಕೆ ಉಚ್ಚಿಲ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಭಜನೆ, ರಾತ್ರಿ 8ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ಶ್ರೀ ಬ್ರಹ್ಮಬೈದರ್ಕಳ ಭಜನಾ ಮಂಡಳಿ ಬೋಳ ಅವರಿಂದ ಕುಣಿತ ಭಜನೆ, ರಾತ್ರಿ 11ಕ್ಕೆ ಅಂಬಲಪಾಡಿ ಅಮ್ಮ ಡ್ರೀಮ್ಸ್ ಮೆಲೋಡೀಸ್, ಕಲಾ ಭೂಮಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪುಟಾಣಿ ಗಾಯಕಿ ಬೇಬಿ ಶೀಯ ಎಸ್. ಅಂಬಲಪಾಡಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಹಾಕುಂಭ ಮೇಳ – 2025 ತ್ರಿವೇಣಿ ಸಂಗಮ ತೀರ್ಥವನ್ನು ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಭಕ್ತರಿಗೆ ಕಲಶ ಸ್ನಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.