ರೋಹನ್ ಕಾರ್ಪೊರೇಷನ್ ನಲ್ಲಿ ಪರಿಸರ ಪ್ರತಿಜ್ಞೆ ಹಾಗೂ ಗಿಡ ನೆಡುವುದರೊಂದಿಗೆ ವಿಶ್ವ ಪರಿಸರ ದಿನ ಆಚರಣೆ.

ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ, ನಗರದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ರೋಹನ್ ಕಾರ್ಪೊರೇಷನ್, ತನ್ನ ರೋಹನ್ ಸಿಟಿ ಆವರಣದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ರೋಹನ್ ಕಾರ್ಪೋರೇಶನ್ ನಿನ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ರವರು ತಮ್ಮ ಉದ್ಯೋಗಿಗಳೊಂದಿಗೆ ಸಸಿಗಳನ್ನು ನೆಟ್ಟು , ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ರಚಿಸಲಾದ ರೋಹನ್ ಕಾರ್ಪೊರೇಷನ್ ಪರಿಸರದ ಪ್ರತಿಜ್ಞೆಯನ್ನು ಪಠಿಸಲಾಯಿತು.

ರೋಹನ್ ಕಾರ್ಪೊರೇಷನ್ ನ ಪರಿಸರ ಮತ್ತು ಸುರಕ್ಷತಾ ವಿಭಾಗದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.