ಅಜೆಕಾರು: ನಮ್ಮ ತುಳುನಾಡ್ ಟ್ರಸ್ಟ್ (ರಿ) ಹಾಗೂ ಕಾರ್ಕಳ ಟೈಗರ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ.

ಕಾರ್ಕಳ: ನಮ್ಮ ತುಳುನಾಡ್ ಟ್ರಸ್ಟ್(ರಿ), ಕಾರ್ಕಳ ಟೈಗರ್ಸ್ ಹಾಗೂ ಶ್ರೀ ಪೆಲಿಕ್ಸ್ ಡಿಸೋಜ ಇವರ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಅಜೆಕಾರು ಮರ್ಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡೆಯಂಗಡಿ ಇಲ್ಲಿ ಜೂ. 7ರಂದು ನಡೆಯಿತು. ಈ ಸಂದರ್ಭದಲ್ಲಿ ನಮ್ಮ ತುಳುನಾಡ್ ಟ್ರಸ್ಟ್ ನ ಅಧ್ಯಕ್ಷ‌ರಾದ ಶ್ರೀ ರೋಹಿತಾಶ್ವ ರವರು ಮಾತನಾಡಿ ಸರಕಾರಿ ಶಾಲೆಯಲ್ಲಿ ಮೌಲ್ಯಯುತವಾದ ಶಿಕ್ಷಣ ದೊರೆಯುತ್ತಿದ್ದು ಶಾಲಾ ಮಕ್ಕಳಿಗೆ ದಾನಿಗಳ ನೆರವಿನಿಂದ ಪುಸ್ತಕ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಮಕ್ಕಳಿಗೆ ಆರ್ಥಿಕ ಹೊರೆ […]

ಕಾರ್ಕಳ: ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ.

ಕಾರ್ಕಳ: ಕಸಬಾ ಗ್ರಾಮದ ಮಹಿಳೆಯೊಬ್ಬರು ಮನನೊಂದು ಅವರ ವಾಸದ ಮನೆಯ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ವೀಣಾ (62) ಎಂದು ಗುರುತಿಸಲಾಗಿದೆ. ಇವರು 13 ವರ್ಷದ ಹಿಂದೆ ಬಿದ್ದು ತಲೆಗೆ ಗಾಯವಾಗಿ ಆಪರೇಶನ್‌ ಆಗಿದ್ದು ಅದಾದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಜೂ. 6ರಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೂ.9 ರಂದು ಝೇಂಕಾರ ಟ್ರೂಪ್‌ನಿಂದ ಸಂಗೀತ ಮಹೋತ್ಸವ

ಉಡುಪಿ: ಸಂಗೀತ ಕ್ಷೇತ್ರದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎನ್ನುವ ಸದಾಶಯದಿಂದ ರೂಪುಗೊಂಡ ಉಡುಪಿಯ ಝೇಂಕಾರ ಟ್ರೂಪ್‌ನ 10 ನೇ ವಾರ್ಷಿಕೋತ್ಸವ ದಿನಪೂರ್ತಿ ಜೂ.9 ರಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ.ಸಂಸ್ಥೆಯ ಚೇತನ್ ನಾಯಕ್, ವಿಠಲ್ ನಾಯಕ್ ರವರು ಸುದ್ದಿಗೋಷ್ಠಿ ನಡೆಸಿ ಅಂದು ಬೆಳಗ್ಗೆ 8.45 ರಿಂದ ರಾತ್ರಿ 9 ಗಂಟೆಯವೆರೆಗೆ ಪ್ರಸಿದ್ಧ ಸಂಗೀತಜ್ಞರುಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಬೆಳಗ್ಗೆ 9 ಕ್ಕೆ ಉದಯ ರಾಗ ಕಾರ್ಯಕ್ರಮದಲ್ಲಿ ಸಮೀರ್ ರಾವ್ ಅವರಿಂದ ಕೊಳಲು ವಾದನ ನಡೆಯಲಿದೆ. ಬೆಳಗ್ಗೆ 10.45 […]

ರೋಹನ್ ಕಾರ್ಪೊರೇಷನ್ ನಲ್ಲಿ ಪರಿಸರ ಪ್ರತಿಜ್ಞೆ ಹಾಗೂ ಗಿಡ ನೆಡುವುದರೊಂದಿಗೆ ವಿಶ್ವ ಪರಿಸರ ದಿನ ಆಚರಣೆ.

ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ, ನಗರದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ರೋಹನ್ ಕಾರ್ಪೊರೇಷನ್, ತನ್ನ ರೋಹನ್ ಸಿಟಿ ಆವರಣದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ರೋಹನ್ ಕಾರ್ಪೋರೇಶನ್ ನಿನ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ರವರು ತಮ್ಮ ಉದ್ಯೋಗಿಗಳೊಂದಿಗೆ ಸಸಿಗಳನ್ನು ನೆಟ್ಟು , ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ರಚಿಸಲಾದ ರೋಹನ್ ಕಾರ್ಪೊರೇಷನ್ ಪರಿಸರದ ಪ್ರತಿಜ್ಞೆಯನ್ನು ಪಠಿಸಲಾಯಿತು. ರೋಹನ್ ಕಾರ್ಪೊರೇಷನ್ ನ ಪರಿಸರ ಮತ್ತು ಸುರಕ್ಷತಾ ವಿಭಾಗದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈನಾಡು ಪತ್ರಿಕೆ- ತೆಲುಗು ಈಟಿವಿ, ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಹೈದರಾಬಾದ್‌: ಈನಾಡು ಪತ್ರಿಕೆ, ತೆಲುಗು ಈಟಿವಿ ಹಾಗೂ ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.ಈಚೆಗೆ ಅನಾರೋಗ್ಯಕ್ಕೊಳಗಾಗಿದ್ದ ರಾಮೋಜಿ ರಾವ್ ಅವರನ್ನು ಹೈದರಾಬಾದ್‌ನ ಸ್ಟಾ‌ರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 3 ಗಂಟೆ ಸೂಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.