ಮೇ.9 ರಿಂದ 14: ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ.

ಬ್ರಹ್ಮಾವರ: ತಾಲೂಕಿನ ಬ್ರಹ್ಮಾವರ ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೇ.9 ರಿಂದ 14ರ ವರೆಗೆ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮಗಳು ದೇವರ ಸನ್ನಿಧಿಯಲ್ಲಿ ನಡೆಯಲಿದೆ.

ಮೇ.9 ಗುರುವಾರ ವಿಶ್ಲೇಶ್ವರ ಪ್ರಾರ್ಥನಾ, ಮುಹೂರ್ತ ಬಲಿ, ಅಂಕುರ ಸ್ಥಾಪನಾದಿಗಳು, ಮಧ್ಯಾಹ್ನ ಸಂತರ್ಪಣೆ ಮತ್ತು ರಾತ್ರಿ ಸಣ್ಣ ರಂಗಪೂಜೆ.

ಮೇ.10 ಶುಕ್ರವಾರ ಧ್ವಜಾರೋಹಣ, ನಿತ್ಯಬಲಿ, ಸಂತರ್ಪಣೆ, ಸಾಯಂಕಾಲ ಸವಾರಿಬಲಿ, ಭೇರಿತಾಡನ, ಗಜವಾಹನೋತ್ಸವ, ರಾತ್ರಿ ಸಣ್ಣ ರಂಗಪೂಜೆ.

ಮೇ.11 ಶನಿವಾರ ದೊಡ್ಡರಂಗಪೂಜೆ, ನಿತ್ಯಬಲಿ, ಸಂತರ್ಪಣೆ, ಸಾಯಂಕಾಲ ಸವಾರಿ ಬಲಿ, ಉತ್ಸವ ಬಲಿ, 2 ಕಟ್ಟೆ ಪೂಜೆಗಳು, ರಾತ್ರಿ ಮಹಾರಂಗಪೂಜೆ.

ಮೇ.12 ಆದಿತ್ಯವಾರ ನಿತ್ಯಬಲಿ, ಮಹಾಪೂಜೆ, (ಮಧ್ಯಾಹ್ನ 12.30ಕ್ಕೆ) ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಾಯಂಕಾಲ ಶ್ರೀ ಮನ್ಮಹಾರಥೋತ್ಸವ, ಭೂತಬಲಿ ಶಯನೋತ್ಸವ, ಕವಾಟ ಬಂಧನ

ಮೇ.13 ಸೋಮವಾರ ತುಲಾಭಾರ ಸೇವೆ, ಕವಾಟೋದ್ಘಾಟನೆ, ಭಕ್ತಾದಿಗಳ ತುಲಾರೋಹಣ, ನಿತ್ಯಬಲಿ, ವಸಂತ ಸಮಾರಾಧನೆ ರಾತ್ರಿ ಅವಭ್ರತ ಸ್ನಾನ, ಕಟ್ಟೆಪೂಜೆ ಪೂರ್ಣಾಹುತಿ.

ಮೇ.14ನೇ ಮಂಗಳವಾರ ಸಂಪ್ರೋಕ್ಷಣೆ
ಸಂಪ್ರೋಕ್ಷಣೆ, ಕುಂಭಾಭಿಷೇಕ, ಫಲ-ಮಂತ್ರಾಕ್ಷತೆ ಇತ್ಯಾದಿ, ಮಧ್ಯಾಹ್ನ ಸಂತರ್ಪಣೆ ರಾತ್ರಿ ಮಾರಿಪೂಜೆ ನಡೆಯಲಿದೆ.

ಇಂದು ಹೊರಕಾಣಿಕೆ ಮೆರವಣಿಗೆ:
ಮೇ.9 ಗುರುವಾರ ಸಂಜೆ 5 ಗಂಟೆಗೆ ಆರೂರಿನ ಹಾಲೆಕಟ್ಟೆಯಿಂದ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 7 ಗಂಟೆಗೆ ನೃತ್ಯ ವೈಭವ – ನುರಿತ ಕಲಾವಿದರಿಂದ ಹಾಗೂ ರಸಮಂಜರಿ ಕಾರ್ಯಕ್ರಮ,
ಸಂಜೆ 8 ಗಂಟೆಗೆ ಕುಂದಾಪುರ ಕನ್ನಡ ಕಣ್ಮಣಿ ಮನು ಹಂದಾಡಿ ಹಾಗೂ ತಂಡದವರಿಂದ ನಗೆ ಹಬ್ಬ“ಕಾಮಿಡಿ ಕಂಪನಿ” ನಡೆಯಲಿದೆ.

ಮೇ.10 ಶುಕ್ರವಾರ ಸಂಜೆ 5 ಗಂಟೆಯಿಂದ
ಧಾರ್ಮಿಕ ಸಭಾ ಕಾರ್ಯಕ್ರಮ
ಜರಗಲಿದೆ. ಆಶೀರ್ವಚನವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಹಾಗೂ ಪ್ರವಚನವನ್ನು ಉಡುಪಿ ವಿದ್ವಾನ್, ಶತಾವಧಾನಿ ರಮಾನಾಥ ಆಚಾರ್ಯ ಅವರು ಮಾಡಲಿದ್ದಾರೆ

ಈ ಸಂದರ್ಭದಲ್ಲಿ ನೂತನ ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸುವುದು. ರಾತ್ರಿ 8 ಗಂಟೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆ ಬೊಳ್ಳಿ ಡಾ. ದೇವದಾಸ್‌ ಕಾಪಿಕಾಡ್‌ ರವರು ರಚಿಸಿ ನಟಿಸಿ ನಿರ್ದೇಶಿಸಿರುವ ಕಾಪಿಕಾಡ್, ಬೋಳಾರ್, ವಾಮಂಜೂರು, ಅಭಿನಯದಲ್ಲಿ ಚಾಪರ್ಕ ಕಲಾವಿದರಿಂದ ಈ ವರ್ಷದ ವಿಭಿನ್ನ ಶೈಲಿಯ “ಪನಿಯರೆ ಆವಂದಿನ” ನಾಟಕ ನಡೆಯಲಿದೆ.

ಮೇ.12 ಆದಿತ್ಯವಾರ ಮಧ್ಯಾಹ್ನ ಗಂಟೆ 12-30ಕ್ಕೆ ತೆಂಕು ಹಾಗೂ ಬಡಗು ಕಲಾವಿದರಿಂದ ಗಾನ ವೈಭವ ಜರಗಲಿವೆ ಎಂದು ಪ್ರಕಟಣೆ ತಿಳಿಸಿದೆ.