ಮೂಡಬಿದ್ರೆ: ಭಾರತೀಯ ಕಥೋಲಿಕ್ ಯುವ ಸಂಚಾಲನ್ ವತಿಯಿಂದ ರಕ್ತದಾನ ಹಾಗೂ ಕೇಶದಾನ ಶಿಬಿರ

ಮೂಡಬಿದ್ರೆ: ಭಾರತೀಯ ಕಥೋಲಿಕ್ ಯುವ ಸಂಚಾಲನ್ ಮೂಡುಬಿದಿರೆ ಘಟಕ ಇದರ ಸುವರ್ಣ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್, ಜೈನ್ ಮೆಡಿಕಲ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಜ. 26 ರಂದು ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ಸವಿನೆನಪಿಗಾಗಿ ರಕ್ತದಾನ ಮತ್ತು ಕೂದಲುದಾನ ಶಿಬಿರವನ್ನು ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಕೊರ್ಪುಸ್ ಕ್ರಿಸ್ತಿ ಚರ್ಚ್ ನ ಧರ್ಮಗುರು ವಂದನೀಯ ಒನಿಲ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರೊ. ರೋಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ಅಧ್ಯಕ್ಷರು ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್; ಡಾ. ಮಹಾವೀರ ಜೈನ್ ವ್ಯವಸ್ಥಾಪಕ ನಿರ್ದೇಶಕರು ಜೈನ್ ಮೆಡಿಕಲ್ ಸೆಂಟರ್; ವಿನ್ಸೆಂಟ್ ಮಸ್ಕರೇನಸ್, ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕರು; ದಿ. ಗ್ರೇಶನ್ ರೋಡ್ರಿಗಸ್ ಇವರ ತಂದೆ ಲಿಯೋ ರೋಡ್ರಿಗಸ್, ರೂಬನ್ ಸೆರಾವೊ ಅಧ್ಯಕ್ಷರು ಭಾರತೀಯ ಕಥೋಲಿಕ್ ಯುವ ಸಂಚಾಲನ ಮೂಡುಬಿದಿರೆ ಘಟಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

62 ದಾನಿಗಳು ರಕ್ತದಾನ ಹಾಗೂ 15 ದಾನಿಗಳು ತಮ್ಮ ಕೇಶ ದಾನ ಮಾಡಿದರು.