ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬದ ಸದಸ್ಯರಿಗೆ ನೀಡಲಾದ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡನ್ನು ಪ್ರಸಕ್ತ ಸಾಲಿಗೆ ನವೀಕರಿಸಲಾಗುತ್ತಿದ್ದು, ಕಾರ್ಡ್ ಹೊಂದಿರುವ ಕುಟುಂಬದ ಯಾವುದೇ ಒಬ್ಬ ಸದಸ್ಯರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮುಚ್ಚಳಿಕೆ ಪತ್ರ ಹಾಗೂ ಹಳೆ ಆರೋಗ್ಯ ಕಾರ್ಡ್ ಪ್ರತಿಯೊಂದಿಗೆ ಜುಲೈ 31 ರ ಒಳಗಾಗಿ ನಗರಸಭಾ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬೇಕು.

ದಾಖಲೆ ಸಲ್ಲಿಸಿದವರ ಕಾರ್ಡ್ಗಳನ್ನು ಮಾತ್ರ ನವೀಕರಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.